February 26, 2021

ದುಬೈ ವಿಮಾನ ನಿಲ್ದಾಣದಲ್ಲಿ ಇನ್ನು ಮುಂದೆ ನಿಮ್ಮ ಪಾಸ್ಪೋರ್ಟ್ ಬೇಕಾಗಿಲ್ಲ!

ದುಬೈ ಹಲವಾರು ವಿಶಿಷ್ಟತೆಗಳಿಗೆ, ದಾಖಲೆಗಳಿಗೆ ಹೆಸರುವಾಸಿಯಾಗಿದೆ. ತಂತ್ರಜ್ಞಾನದ ಬಳಕೆಯಲ್ಲಿ ಯು ಎ ಇ ಎಂದಿಗೂ  ಒಂದು ಹೆಜ್ಜೆ ಮುಂದೆ. ನಾವು ಸರ್ವೇ ಸಾಮಾನ್ಯವಾಗಿ ಕೇಳುವ ವಿಮಾನ ನಿಲ್ದಾಣದ ಸುದ್ದಿಗಳಿಗಿಂತ ಭಿನ್ನವಾಗಿದೆ ಈ ಸುದ್ದಿ. ಹೌದು ದುಬೈನಲ್ಲಿ ಇನ್ನು ಮುಂದಕ್ಕೆ ಪ್ರಯಾಣಿಕರು ಭದ್ರತಾ ತಪಾಸಣೆಯ ತೊಂದರೆಗಳಿಲ್ಲದೆ ನೇರವಾಗಿ ವಿಮಾನ ನಿಲ್ದಾಣದಿಂದ ಹೊರಗೆ ಅಥವಾ ಒಳಗೆ ಬರಬಹುದು. ಪ್ರಾಯೋಗಿಕ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ದುಬೈ ವಿಮಾನ ನಿಲ್ದಾಣವು ಅಧಿಕೃತವಾಗಿ ‘ಸ್ಮಾರ್ಟ್ ಟ್ರಾವೆಲ್’ ವ್ಯವಸ್ಥೆಯನ್ನು ರೂಪಿಸಿದೆ, ಅದು ಪ್ರಯಾಣಿಕರಿಗೆ ತಮ್ಮ ಪಾಸ್‌ಪೋರ್ಟ್ ಬಳಸದೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

2019 ರ ಗೈಟೆಕ್ಸ್‌ ಪ್ರದರ್ಶನದಲ್ಲಿ ಮೊದಲ ಬಾರಿಗೆ ಬಹಿರಂಗಗೊಂಡ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ  ಸಮಗ್ರ ಬಯೋಮೆಟ್ರಿಕ್ ಸಂಪರ್ಕವಿಲ್ಲದ ಮಾರ್ಗವನ್ನು ಇತ್ತೀಚೆಗೆ ಜನರಲ್ ಡೈರೆಕ್ಟರೇಟ್ ಆಫ್ ರೆಸಿಡೆನ್ಸಿ ಮತ್ತು ವಿದೇಶಿ ವ್ಯವಹಾರ ಇಲಾಖೆಯ (ಜಿಡಿಆರ್‌ಎಫ್‌ಎ) ಉನ್ನತ ಅಧಿಕಾರಿಗಳು  ಔಪಚಾರಿಕವಾಗಿ ಅನಾವರಣಗೊಳಿಸಿದರು. ಸುರಕ್ಷತೆಗೆ ಒತ್ತು ನೀಡುವ ಉದ್ದೇಶದಿಂದ ಪ್ರಯಾಣದ ಎಲ್ಲಾ ಘಟ್ಟದಲ್ಲೂ ಜನರ ನೇರ ಸ್ಪರ್ಶವಿಲ್ಲದ ಈ ಒಂದು ವ್ಯವಸ್ಥೆಯು ಭವಿಷ್ಯದಲ್ಲಿ ಬರಬಹುದಾದ ಸಾಂಕ್ರಮಿಕ ರೋಗಗಳ ತಡೆಗಟ್ಟುವಿಕೆಗೆ ಪರಿಣಾಮಾಕಾರಿಯಾಗಲಿದೆ.

ಇದರ ವಿಶೇಷತೆಗಳು ಏನೆಂದರೆ ಭವಿಷ್ಯದಲ್ಲಿ ಇಮಿಗ್ರೇಷನ್ ಟರ್ಮಿನಲ್ ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು. ಬಯೋ ಮೆಟ್ರಿಕ್ ತಂತ್ರಜ್ಞಾನದ ಸಹಾಯದಿಂದ ಕಣ್ಣು ಮತ್ತು ಮುಖದ ಗುರುತಿಸುವಿಕೆ ಪ್ರಕ್ರಿಯೆ ನಡೆಸಿರುವುದರಿಂದ ಪ್ರಯಾಣಿಕರು ಯಾವುದೇ ಅಡೆತಡೆಗಳಿಲ್ಲದೆ ನಿರಾಳವಾಗಿ ವಿಮಾನ ನಿಲ್ದಾಣದಿಂದ ಹೊರಕ್ಕೆ ಅಥವಾ ಭದ್ರತಾ ಅನುಮತಿಯ ನಂತರ  ತಮ್ಮ ಖಾಯ್ದಿರಿಸಿದ ವಿಮಾನದೊಳಗೆ ಚಲಿಸಬಹುದು. ವಿಮಾನ ನಿಲ್ದಾಣದೊಳಗಿನ ಎಲ್ಲರೂ ತಂತ್ರಜ್ಞಾನದ ಕಣ್ಗಾವಲಿನೊಳಗೆ ಇರುವುದರಿಂದ ಇದು ಹೆಚ್ಚು ಸುರಕ್ಷಿತ ಹಾಗು ಪ್ರಯಾಣಿಕರಿಗೆ ಅನುಕೂಲಕರವಾಗಿದೆ.

122 ಸ್ಮಾರ್ಟ್ ಗೇಟ್ ಗಳ ಅಳವಡಿಕೆ

ಸ್ಮಾರ್ಟ್ ಗೇಟ್ ಮತ್ತು ಸ್ಮಾರ್ಟ್ ಟನೆಲ್ ಗಳನ್ನು ನಿರ್ಮಿಸಿದ್ದು, ಪ್ರಯಾಣಿಕರು ತಮ್ಮ ಐಡಿ ಕಾರ್ಡ್ ಬಳಸಿ ಸ್ಮಾರ್ಟ್ ಗೇಟ್ ಮೂಲಕ ಅಥವಾ ಮುಖ ಗುರುತಿಸಿ ಸ್ಮಾರ್ಟ್ ಟನಲ್ ಮೂಲಕ ಹೊರ ಬರಬಹುದಾಗಿದೆ. ಮಾದ್ಯಮದ ಜೊತೆ ಮಾತನಾಡಿದ ದುಬೈನ ಜಿ ಡಿ ಆರ್ ಎಫ್ ಎ ಮಹಾನಿರ್ದೇಶಕ ಮೇಜರ್ ಜನರಲ್ ಮಹಮ್ಮದ್ ಅಹ್ಮದ್ ಅಲ್ ಮಾರ್ರಿ, “ಭವಿಷ್ಯದಲ್ಲಿ, ಇಮಿಗ್ರೇಷನ್ ಟರ್ಮಿನಲ್ ಗಳು ಅಸ್ತಿತ್ವದಲ್ಲಿರಲ್ಲ ಎಂದು ನಾವು ನಿರೀಕ್ಷಿಸುತ್ತೇವೆ. ಪ್ರಯಾಣಿಕರು ತಮ್ಮ ಎಲ್ಲಾ ಪ್ರಕ್ರಿಯೆಗಳನ್ನು  ವಿಮಾನ ನಿಲ್ದಾಣದಲ್ಲಿ ಮುಕ್ತವಾಗಿ ಗೊಂದಲಗಳಿಲ್ಲದೆ ಪೂರ್ಣಗೊಳಿಸಬಹುದು.  ಒಬ್ಬ ಪ್ರಯಾಣಿಕನು ತನ್ನೆಲ್ಲಾ ಪ್ರಯಾಣದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯ ಆತನ ನಡಿಗೆಯ ಮೇಲೆ ಅವಲಂಬಿತಗೊಂಡಿರುತ್ತದೆ. ಒಟ್ಟಾರೆ ಯಾವುದೇ ಭದ್ರತಾ ತಪಾಸಣೆಯ ಕಿರುಕುಳವಿಲ್ಲದೆ ಪ್ರಯಾಣಿಕರಿಗೆ ಸುಲಭವಾಗಿ ಪ್ರಯಾಣ ನಡೆಸಬಹುದು.

ಶೋಷಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಮಿಡಿಯುವ ಪ್ರಸ್ತುತ ಪಾಕ್ಷಿಕಕ್ಕೆ ಚಂದಾದಾರಾಗಿರಿ. ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!