ದುಬೈ ಕೆಎಸ್ ಸಿಸಿ ವತಿಯಿಂದ ಕಾರ್ಮಿಕರ ದಿನಾಚರಣೆ

Prasthutha|

ದುಬೈ: ಕರ್ನಾಟಕ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ವತಿಯಿಂದ ಕಮ್ಯುನಿಟಿ ಡೆವಲಪೆಂಟ್ ಅಥಾರಿಟಿ (ಸಿಡಿಎ) ಹಾಗೂ ಯುಎಇ ಸರಕಾರದ ಸಹಕಾರದೊಂದಿಗೆ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಲ್ ಫಹದ್ ಟೈಲ್ಸ್ ಆಂಡ್ ಮೊಸ್ಸಾಯಿಕ್ ಫ್ಯಾಕ್ಟರಿ ಅಲ್ ಕುಸ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.

- Advertisement -


ಕೆಎಸ್ ಸಿಸಿಯ ನೇತೃತ್ವದಲ್ಲಿ ಪ್ರೈಮ್ ಹೆಲ್ತ್ ಕೇರ್ ಗ್ರೂಪ್ ಸಹಯೋಗದಲ್ಲಿ ಆಯೋಜಿಸಿದ ಈ ಶಿಬಿರವು ಸುಮಾರು 175ರಷ್ಟು ಅಲ್ ಫಹದ್ ಕಾರ್ಖಾನೆಯ ಕಾರ್ಮಿಕರಿಗೆ ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಯಿತು. ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾದ ಆರೋಗ್ಯ ತಪಾಸಣೆ ಶಿಬಿರ ಸಂಜೆ 6:30 ವರೆಗೆ ನಡೆಯಿತು.


ಈ ಶಿಬಿರದಲಿ ಉಚಿತ ಮಧುಮೇಹ, ರಕ್ತದೊತ್ತಡ, ಕೊಲಸ್ಟ್ರಾಲ್ ಮುಂತಾದ ರೋಗಗಳ ತಪಾಸಣೆ ನಡೆಸಿ, ಈ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಪ್ರೈಮ್ ಮೆಡಿಕಲ್ ಸೆಂಟರ್ ನ ಉಚಿತ ಪ್ರಿವೇಲೆಜ್ ಕಾರ್ಡ್ ಕಾರ್ಡ್ ವಿತರಣೆ ಮಾಡಲಾಯಿತು. ಇದನ್ನು ಯುಎಇಯ ದುಬೈ, ಅಜ್ಮಾನ್ ಮತ್ತು ಶಾರ್ಜಾ ಶಾಖೆಗಳಲ್ಲಿರುವ ಪ್ರೈಮ್ ಸೇಟರ್ ಗಳಲ್ಲಿ ಬಳಸಬಹುದಾಗಿದೆ. ಈ ಶಿಬಿರ ಆಯೋಜಿಸಲು ಸಹಕರಿಸಿದ ಯುಎಇ ಸರ್ಕಾರಕ್ಕೆ ಕಮ್ಯುನಿಟಿ ಡೆವಲಪ್ಮೆಂಟ್ ಅಥಾರಿಟಿ ದುಬೈ ಮತ್ತು ಯಶಸ್ವಿ ಶಿಬಿರ ನಡೆಸಿದ ಪ್ರೈಮ್ ಹೆಲ್ತ್ ಕೇರ್ ಸೆಂಟರ್ ಗೆ ಕೆಎಸ್ ಸಿಸಿಯು ಅಭಿನಂದನೆ ಸಲ್ಲಿಸಿದೆ.



Join Whatsapp