ಜಲಾವೃತವಾಗಿಯೇ ಇರುವ ದುಬೈ ನಗರ: ಯುಎಇ ಆದ್ಯಂತ ಶಾಲಾ ಕಾಲೇಜು ಒಂದು ವಾರ ರಜೆ

Prasthutha|

ದುಬೈ: ಗಲ್ಫ್ ರಾಷ್ಟ್ರದ ಇತಿಹಾಸದಲ್ಲೇ ಅತಿದೊಡ್ಡ ಮಳೆ (4 ದಿನಗಳ ಹಿಂದೆ ಸುರಿದ ಮಳೆ)ಗೆ ಯುಎಇನ ಹಲವು ನಗರಗಳು ತತ್ತರಿಸಿ ಹೋಗಿದ್ದು, ದುಬೈ ನಗರ ಇನ್ನೂ ಜಲಾವೃತವಾಗಿಯೇ ಇದೆ. ಅತ್ಯಂತ ಜನನಿಬಿಡ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆ ತಗ್ಗಿದ ಹಿನ್ನೆಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಸಂಚಾರ ಆರಂಭಿಸಲಾಗಿದೆ.

- Advertisement -

ಆದರೆ ನಗರದ ರಸ್ತೆಗಳು ಇನ್ನೂ ಜಲಾವೃತವಾಗಿರುವ ಕಾರಣ ವಿಮಾನ ಸಿಬ್ಬಂದಿ ಸಕಾಲದಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಲು ಸಾಧ್ಯವಾಗದೆ ವಿಮಾನಗಳು ವಿಳಂಬವಾಗಿ ಸಂಚರಿಸುತ್ತಿವೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ ಒಂದು ವಾರಗಳ ಕಾಲ ರಜೆ ಘೋಷಿಸಲಾಗಿದೆ.

- Advertisement -

ದುಬೈನಲ್ಲಿ ಸೋಮವಾರ- ಮಂಗಳವಾರ 25 ಸೆಂ.ಮೀನಷ್ಟು ಸುರಿದ ಮಳೆ ದೇಶದಲ್ಲಿ ಒಂದಿಡೀ ವರ್ಷಕ್ಕೆ ಸುರಿಯುವ ಮಳೆಗೆ ಸಮ. ಇದನ್ನು ತಾಳಲಾಗದೇ ಯುಎಇ ಇನ್ನೂ ಚೇತರಿಸಿಕೊಳ್ಳಬೇಕಾಗಿದೆ.

Join Whatsapp