ಮಂಗಳೂರು : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದ.ಕ. ಜಿಲ್ಲಾ ಶಾಖೆಯು ಹಲವು ಬಾರಿ ಪ್ರತಿಭಟನೆಗಳನ್ನು ನಡೆಸಿ ಒತ್ತಡ ಹೇರಿರುವ ಪರಿಣಾಮವಾಗಿ, ಮಂಗಳೂರು ಮಹಾನಗರ ಪಾಲಿಕೆಯ ಒಳಚರಂಡಿ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುವ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ ಇತ್ತೀಚೆಗೆ ನಡೆಯಿತು. ಈ ಬಗ್ಗೆ ‘ಪ್ರಸ್ತುತ’ಕ್ಕೆ ದ.ಸಂ.ಸ. (ಅಂಬೇಡ್ಕರ್ ವಾದ) ಜಿಲ್ಲಾ ಶಾಖೆಯ ಪ್ರಧಾನ ಸಂಚಾಲಕರಾದ ಜಗದೀಶ್ ಪಾಂಡೇಶ್ವರ ಮಾಹಿತಿ ನೀಡಿದ್ದಾರೆ.
ಲೇಡಿಹಿಲ್ ನ ಆರೋಗ್ಯ ಕೇಂದ್ರದಲ್ಲಿ ಕೆಎಂಸಿ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗಿದೆ. ದ.ಸಂ.ಸ (ಅಂಬೇಡ್ಕರ್ ವಾದ) ಜಿಲ್ಲಾ ಶಾಖೆಯು ಮಹಾನಗರ ಪಾಲಿಕೆಯಲ್ಲಿ ಒಳಚರಂಡಿ ವಿಭಾಗದ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಗಮನ ಸೆಳೆಯಲು ಹಲವು ಬಾರಿ ಪ್ರತಿಭಟನೆ ಈ ಹಿಂದೆ ಆಯೋಜಿಸಿತ್ತು. ಆ ವೇಳೆ ಮಂಡಿಸಲಾಗಿದ್ದ ಹಲವು ಬೇಡಿಕೆಗಳ ಪೈಕಿ, ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ ನಡೆಸುವಂತೆಯೂ ಒತ್ತಾಯಿಸಲಾಗಿತ್ತು. ಆ ಪ್ರಕಾರ, ಇದೀಗ ನೌಕರರ ಆರೋಗ್ಯ ತಪಾಸಣಾ ಶಿಬಿರ ನಡೆದಿದೆ.
ಈ ಆರೋಗ್ಯ ತಪಾಸಣಾ ಶಿಬಿರದ ವೇಳೆ ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಸದಾಶಿವ ಉರ್ವಾಸ್ಟೋರ್, ಮಂಗಳೂರು ತಾಲೂಕು ಸಂಚಾಲಕರಾದ ಕೆ. ಚಂದ್ರ ಕಡಂದಲೆ, ಕೆಎಂಸಿ ಆಸ್ಪತ್ರೆಯ ವೈದ್ಯರು, ಕಾರ್ಮಿಕ ಮುಖಂಡರುಗಳಾದ ಪದ್ಮನಾಭ ವಾಮಂಜೂರು, ಶರಣ್ ಶೆಟ್ಟಿ, ದಿನೇಶ್ ಮುಲ್ಲಕಾಡು, ರಾಜೇಶ್ ಪೆರ್ನಾಜೆ, ನವೀನ್, ರಾಮಕೃಷ್ಣ, ಅಶ್ವಿನ್ ಮುಂತಾದವರು ಉಪಸ್ಥಿತರಿದ್ದರು.