ಬಂಟ್ವಾಳ ತಾಲೂಕಿನಲ್ಲಿ ಅಪರಾಧ ಪ್ರಕರಣ ಹೆಚ್ಚಾಗಲು ಮಾದಕ ವಸ್ತು ಮುಖ್ಯ ಕಾರಣ: ಎಸ್’ಡಿಪಿಐ

Prasthutha|

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸರಬರಾಜು ನಿರಂತರವಾಗಿ ನಡೆಯುತ್ತಿದ್ದು, ಇದರ ಚಟ್ಟಕ್ಕೆ ಬಿದ್ದಿರುವ ಯುವಕರು ಅದರ ಮತ್ತಿನಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲು ಇದೇ ಪ್ರಮುಖ ಕಾರಣ. ಅದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಶಕ್ತಿ ಮೀರಿ ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಯತ್ನಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ ಆಗ್ರಹಿಸಿದ್ದಾರೆ.

- Advertisement -

ಇತ್ತೀಚಿಗೆ ವಿಟ್ಲದಲ್ಲಿ ಯುವಕನೊಬ್ಬನಿಗೆ ಪೆಟ್ರೋಲ್ ಸುರಿದು ಕೊಂದಿರುವ ಘಟನೆ ಮತ್ತು ಬಂಟ್ವಾಳದಲ್ಲಿ ಯುವಕನೋರ್ವನಿಗೆ ಚೂರಿ ಇರಿದಿರುವ ಪ್ರಕರಣಗಳಲ್ಲಿ ಗಾಂಜಾ ಅಥವಾ ಮಾದಕ ದ್ರವ್ಯ (ಡ್ರಗ್ಸ್)ಪಾತ್ರ ಇರುವುದು ಎದ್ದು ಕಾಣುತ್ತಿದೆ. ಈ ಪ್ರಕರಣಗಳನ್ನು ಕೇವಲ ಸಾಮಾನ್ಯ ಅಪರಾಧ ಪ್ರಕರಣಗಳಾಗಿ ನೋಡದೆ ಇದಕ್ಕೆ ಮೂಲ ಕಾರಣವಾದ ಮಾದಕ ವಸ್ತುಗಳ ಬಳಕೆಯ ಬಗ್ಗೆ ಗಂಭೀರ ತನಿಖೆ ಆಗಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ದಕ್ಷಿಣ ಕನ್ನಡ ಪೊಲೀಸರು ಈ ಮಾದಕ ವಸ್ತುಗಳ ಸಾಗಾಟಗಾರರ ಜನಸಾಮಾನ್ಯರಿಗೆ, ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಹಂಚಿ ತಮ್ಮ ಬಾಳನ್ನೇ ಕತ್ತಲಿಗೆ ತಳ್ಳುತ್ತಿರುವ ಮಧ್ಯವರ್ತಿಗಳನ್ನು ಬೇರು ಸಹಿತ ಕಿತ್ತೊಗೆಯಬೇಕಾಗಿದೆ ಎಂದು ಕಲಂದರ್ ಪರ್ತಿಪ್ಪಾಡಿ ಆಗ್ರಹಿಸಿದ್ದಾರೆ.



Join Whatsapp