ಡ್ರಗ್ಸ್‌ ದಂಧೆ | ಬಿಜೆಪಿ ಯುವ ಮುಖಂಡ ಸಹಿತ 9 ಮಂದಿ ಸೆರೆ

Prasthutha: June 12, 2021

ಹಝಾರಿಬಾಗ್‌ : ಬ್ರೌನ್‌ ಶುಗರ್‌ ಕಳ್ಳ ಸಾಗಾಟ ಜಾಲದಲ್ಲಿ ಓರ್ವ ಬಿಜೆಪಿ ಯು‌ವ ಘಟಕದ ಮುಖಂಡ ಸೇರಿ ಒಂಬತ್ತು ಮಂದಿಯನ್ನು ಜಾರ್ಖಂಡ್‌ ನ ಛಾತ್ರ ಜಿಲ್ಲೆಯ ಪೊಲೀಸರು ಬಂಧಿಲ್ಲಿ ಸಿದ್ದಾರೆ. ದ್ರಗ್ಸ್‌ ದಂಧೆಯಲ್ಲಿ ಬಂಧಿತರಾದವರಿಂದ 296 ಗ್ರಾಮ್ಸ್‌ ಬ್ರೌನ್‌ ಶುಗರ್‌, ಒಂದು ಕಾರು, ಒಂದು ಬೈಕ್‌, 8 ಮೊಬೈಲ್‌ 7.74 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಛಾತ್ರ ಪೊಲೀಸ್‌ ವರಿಷ್ಠಾಧಿಕಾರಿ ರಿಷವ್‌ ಕುಮಾರ್‌ ಝಾ ಅವರು ರಚಿಸಿದ್ದ ತಂಡ ಕಾರ್ಯಾಚರಣೆ ನಡೆಸಿ, ಈ ಜಾಲವನ್ನು ಬೇಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಕೂಡ ಇದ್ದಾನೆ.

ಬಿಜೆಪಿ ಮುಖಂಡ ಹಿಮಾಂಶು ಕುಮಾರ್‌, ಅಮಿತ್‌ ಗುಪ್ತಾ, ಧೀರಜ್‌ ಕುಮಾರ್‌, ಅನುರಾಗ್‌ ಕುಮಾರ್‌, ಚಂದನ್ ಕುಮಾರ್‌ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಸಿನಿಮೀಯ ಶೈಲಿಯಲ್ಲಿ ಈ ಡ್ರಗ್ಸ್‌ ದಂಧೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!