ದುಬೈನಲ್ಲಿ ಜೈಲು ಶಿಕ್ಷೆಗೊಳಗಾದ ಡ್ರಗ್ಸ್ ಪೆಡ್ಲರ್ ಬೆಂಗಳೂರಿನಲ್ಲಿ ಮತ್ತೆ ಸಿಕ್ಕಿಬಿದ್ದ

Prasthutha|

ಬೆಂಗಳೂರು: ದುಬೈನಲ್ಲಿ ಜೈಲು ಸೇರಿ ಕಠಿಣ ಶಿಕ್ಷೆ ಅನುಭವಿಸಿದರೂ ಬುದ್ದಿ ಕಲಿಯದ ಕುಖ್ಯಾತ ಡ್ರಗ್ಸ್ ಪೆಡ್ಲರ್ ರೊಬ್ಬ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುವಾಗ ಬಾಣಸವಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

- Advertisement -

ದುಬೈನ ಕಂಪನಿಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟೀವ್ ಆಗಿ ಕೆಲಸ ಮಾಡುತ್ತಿದ್ದ ಮುನಾಸಿಫ್ ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಬಂಧಿತ ಆರೋಪಿಯಿಂದ 38 ಲಕ್ಷ ಮೌಲ್ಯದ 700 ಗ್ರಾಂ ಎಂಡಿಎಂಎ ಕ್ರಿಷ್ಟಲ್  ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.

- Advertisement -

ಕಳೆದ 2018ರಲ್ಲಿ ದುಬೈನ ಕಂಪನಿಯೊಂದರಲ್ಲಿ ಮುನಾಸಿಫ್ ಸೇಲ್ಸ್ ಎಕ್ಸಿಕ್ಯೂಟೀವ್ ಆಗಿ ಕೆಲಸ ಮಾಡುತ್ತಿದ್ದು ಹೆಚ್ಚಿನ ಹಣದಾಸೆಗೆ ದುಬೈನಲ್ಲಿ ಡ್ರಗ್ ಮಾರಾಟಕ್ಕಿಳಿದು ಅಲ್ಲಿನ ಪೊಲೀಸರ ಕೈಗೆ ಸಿಕ್ಕಿ ಮೂರು ವರ್ಷ ಎಂಟು ತಿಂಗಳು ಜೈಲು ಸೇರಿದ್ದ.

ಬಿಡುಗಡೆಗೊಂಡ ಬಳಿಕ ಆತನನ್ನು ದುಬೈನಿಂದ ಹೊರಹಾಕಿದ ಬಳಿಕ ಕೇರಳದ ಕಾಸರಗೋಡಿಗೆ ಬಂದು ನಂತರ ನಗರವನ್ನು ಸೇರಿಕೊಂಡಿದ್ದ. ಇಲ್ಲಿ ಮುನಾಸಿಫ್ ಹೆಚ್ಚಿನ ಹಣ ಗಳಿಸಲು ಡ್ರಗ್ಸ್ ದಂಧೆ ಶುರುಮಾಡಿಕೊಂಡು ಟೆಲಿಗ್ರಾಮ್ನಲ್ಲಿ ಮೆಸೇಜ್ ಬರುತ್ತಿದ್ದಂತೆ ಡ್ರಗ್ ಡೆಲಿವರಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖವಾಗಿ ಕೇರಳ ಮೂಲದ ಐಟಿ ಬಿಟಿ ಉದ್ಯೋಗಿಗಳಿಗೆ ಈತ ಡ್ರಗ್ ಮಾರುತ್ತಿದ್ದ. ಮಾದಕ ವಸ್ತು ಮಾರಾಟ ಮಾಡ್ತಿದ್ದಾನೆಂಬ ಮಾಹಿತಿ ಸಿಕ್ಕ ಕೂಡಲೇ ಬಾಣಸವಾಡಿ ಪೊಲೀಸ್ ಇನ್ಸ್ ಪೆಕ್ಟರ್ ಸಂತೋಷ್ ಮತ್ತವರ ತಂಡ ಗ್ರಾಹಕರಂತೆ ನಟಿಸಿ ಆರೋಪಿ ಮುನಾಫೀಸ್ನನ್ನು ಬಂಧಿಸಿ ವಿಚಾರಣೆ ಕೈಗೊಂಡಿದೆ.



Join Whatsapp