ನವದೆಹಲಿ: ತ್ರಿಪುರಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಪತ್ರಕರ್ತರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಕೈಬಿಡಬೇಕೆಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಸರ್ಕಾರವನ್ನು ಒತ್ತಾಯಿಸಿದೆ.
ಪತ್ರಕರ್ತರ ವಿರುದ್ಧ ಪೊಲೀಸ್ ಕ್ರಮವನ್ನು ಖಂಡಿಸಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಬ್ಬರು ಲೇಖಕರನ್ನು ರಾತ್ರಿಯವರೆಗೆ ಠಾಣೆಯಲ್ಲಿ ಕೂಡಿಹಾಕಿ ದೌರ್ಜನ್ಯ ಎಸಗಿರುವುದು ತ್ರಿಪುರಾ ಪೊಲೀಸರ ಸ್ಪಷ್ಟ ಮಾನವ ಹಕ್ಕಿನ ಉಲ್ಲಂಘಣೆಯಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಲು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್.ಎಚ್.ಆರ್.ಸಿ) ಸರ್ಕಾರವನ್ನು ಒತ್ತಾಯಿಸಿದೆ.
ಇತ್ತೀಚೆಗೆ ತ್ರಿಪುರಾ ಕೋಮು ಗಲಭೆಗೆ ಸಂಬಂಧಿಸಿದಂತೆ ವರದಿ ಮಾಡಿದ್ದ HW ನ್ಯೂಸ್ ನೆಟ್ ವರ್ಕ್ ನ ಪತ್ರಕರ್ತರಾದ ಸಮೃದ್ಧಿ ಸಕುನಿಯಾ ಮತ್ತು ಸ್ವರ್ಣಾ ಝಾ ಎಂಬವರನ್ನು ಅಸ್ಸಾಂ ಪೊಲೀಸರು ಉಭಯ ರಾಜ್ಯಗಳ ಗಡಿ ಪ್ರದೇಶದ ಕರೀಂಗಂಜ್ ನ ನೀಲಂ ಬಝಾರ್ ನಲ್ಲಿ ಬಂಧಿಸಲಾಗಿತ್ತು.
ವಿಹಿಂಪ ಕಾರ್ಯಕರ್ತನೊಬ್ಬ ನೀಡಿದ ದೂರಿನ ಮೇಲೆ ತ್ರಿಪುರಾ ಫಾತಿಕ್ರೊಯ್ ಪೊಲೀಸ್ ಠಾಣೆಯಲ್ಲಿ ಸುಕುನ್ಯಾ ಮತ್ತು ಝಾ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.