ಟೋಲ್’ನಲ್ಲಿದ್ದ ಮಹಿಳಾ ಉದ್ಯೋಗಿಗೆ ಕಪಾಳಮೋಕ್ಷ ಮಾಡಿದ ಚಾಲಕ !

Prasthutha|

ಭೋಪಾಲ್: ವ್ಯಕ್ತಿಯೊಬ್ಬ ಟೋಲ್ ನಲ್ಲಿದ್ದ ಮಹಿಳಾ ಉದ್ಯೋಗಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಮಧ್ಯಪ್ರದೇಶದ ರಾಜಗಢ-ಭೋಪಾಲ್ ರಸ್ತೆಯಲ್ಲಿರುವ ಕಚ್ನಾರಿಯಾ ಟೋಲ್ ಪ್ಲಾಝಾದಲ್ಲಿ ಘಟನೆ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.

- Advertisement -


ಇಲ್ಲಿನ ಸ್ಥಳೀಯ ವ್ಯಕ್ತಿಯೇ ಟೋಲ್ ಬೂತ್ ನಲ್ಲಿದ್ದ ಮಹಿಳಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ಮಹಿಳೆ ಚಪ್ಪಲಿ ಹಿಡಿದು ಪ್ರತಿದಾಳಿ ನಡೆಸಿದ್ದಾರೆ.


ಸ್ಥಳೀಯ ನಿವಾಸಿ ರಾಜ್ ಕುಮಾರ್ ಗುರ್ಜರ್ ಎಂಬ ವ್ಯಕ್ತಿಯ ಕಾರಿಗೆ ಟೋಲ್ ಪಾವತಿಸಲು ಫಾಸ್ಟ್ ಟ್ಯಾಗ್ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಯನ್ನು ಒಳಗೊಂಡಿರಲಿಲ್ಲ. ಆದರೆ ಮಹಿಳೆ ಟೋಲ್ ಪಾವತಿಸದೇ ವಾಹನ ಹೋಗಲು ಬಿಡುವುದಿಲ್ಲ ಎಂದಿದ್ದಾರೆ. ಇದರಿಂದ ಕೋಪಗೊಂಡ ರಾಜ್ ಕುಮಾರ್ ತಾನು ಸ್ಥಳೀಯನಾಗಿದ್ದು ಟೋಲ್ ನಿಂದ ವಿನಾಯಿತಿ ನೀಡಬೇಕು ಎಂದು ಹೇಳಿದ್ದಾನೆ. ಆದರೆ ಸ್ಥಳೀಯನೆಂದು ಗುರುತಿಸಲು ಯಾವುದೇ ದಾಖಲೆಗಳೂ ಇರಲಿಲ್ಲ. ಮಾತಿನ ಚಕಮಕಿ ನಡೆಯುತ್ತಲೇ ಮಹಿಳೆ ಮೇಲೆ ದಾಳಿ ಮಾಡಿದ್ದಾನೆ.

Join Whatsapp