“ದಲಿತರ ಮನೆಯಲ್ಲಿ ಟೀ ಕುಡಿಯಿರಿ, ಬಳಿಕ BJPಗೆ ಮತ ಹಾಕುವಂತೆ ಹೇಳಿ”

Prasthutha|

ಕ್ನೋ : ‘ನಮ್ಮ ಕಾರ್ಯಕರ್ತರು ದಲಿತರ ಮನೆಗಳಿಗೆ ಹೋಗಿ ಟೀ ಕುಡಿಯಬೇಕು. ಅವರ ಜೊತೆ ಕುಳಿತು ಊಟ ಮಾಡಬೇಕು. ಬಳಿಕ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಅವರಿಗೆ ಹೇಳಬೇಕು’. ಹೀಗೊಂದು ಸಲಹೆ ಕೊಟ್ಟಿರುವುದು ಬೇರಾರು ಅಲ್ಲ. ಉತ್ತರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ !.

- Advertisement -

ನೀವು ದಲಿತರ ಮನೆಗಳಿಗೆ ತೆರಳಿದಾಗ ಅವರು ನಿಮಗೆ ಕುಡಿಯಲು ಏನೂ ಕೊಡದಿದ್ದರೆ ಬೇಸರ ಮಾಡಿಕೊಳ್ಳದೆ ಅದೇ ಮನೆಗೆ ಪ್ರತಿನಿತ್ಯ ಭೇಟಿ ಕೋಡಿ. 10 ದಿನ ಕಳೆದು ಏನೂ ಕೊಡದಿದ್ದರೆ ಭೇಟಿ ಕೊಡುವುದನ್ನು ನಿಲ್ಲಿಸಬೇಡಿ, ಅವರ ಮನೆಯಲ್ಲಿ ಒಂದು ಕಪ್ ಟೀ ಸಿಗುವವರೆಗೆ ನೀವು ಭೇಟಿ ಕೊಡುವುದನ್ನು ಮುಂದುವರಿಸಿ ಎಂದು ಉತ್ತರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಕಾರ್ಯಕರ್ತರಿಗೆ ವಿಚಿತ್ರ ಸಲಹೆ ನೀಡಿದ್ದಾರೆ.

ಲಖ್ನೋದಲ್ಲಿ ನಡೆದ ಪಕ್ಷದ OBC ಸಾಮಾಜಿಕ ಪ್ರತಿನಿಧಿ ಸಮ್ಮೇಳನ ಹಾಗೂ ವೈಶ್ಯ ವ್ಯಾಪಾರಿ ಸಮ್ಮೇಳನದಲ್ಲಿ ಸ್ವತಂತ್ರ ದೇವ್ ಸಿಂಗ್, OBC ಹಾಗೂ ಮೇಲ್ಜಾತಿ ಸಮುದಾಯದ ಪಕ್ಷದ ಪ್ರತಿನಿಧಿಗಳಿಗೆ ದಲಿತರ ಮನೆಗಳಿಗೆ ಆಹಾರ ಸೇವಿಸಿ, ರಾಷ್ಟ್ರೀಯತೆಯ ವಿಚಾರದಲ್ಲಿ ಮತ ಕೇಳುವಂತೆ ಸಲಹೆ ಕೊಟ್ಟಿದ್ದಾರೆ.

- Advertisement -

ಪ್ರತಿನಿಧಿ ಸಮ್ಮೇಳನದಲ್ಲಿ ಮಾತನಾಡುತ್ತಾ ಸಿಂಗ್, ನಮ್ಮ ಕಾರ್ಯಕರ್ತರು ತಮ್ಮ ಮನೆಯ ಸಮೀಪದ ಅಥವಾ ಗ್ರಾಮದಲ್ಲಿರುವ ಕನಿಷ್ಠ 10 ರಿಂದ 100 ದಲಿತ ಮನೆಗಳಿಗೆ ತೆರಳಿ ಆಹಾರ ಸೇವಿಸಿ, ಜಾತಿ- ಪ್ರದೇಶವಾರು ಹಾಗು ಹಣದ ಆಮಿಷಕ್ಕೆ ಒಳಗಾಗಿ ಮತ ಚಲಾಯಿಸುವ ಬದಲು ರಾಷ್ಟ್ರೀಯತೆಯ ವಿಚಾರವನ್ನು ಮುಂದಿಟ್ಟುಕೊಂಡು ಮತ ಚಲಾಯಿಸುವಂತೆ ಮನವೊಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

Join Whatsapp