ಆಂಧ್ರ ಪ್ರದೇಶದ ಕುಪ್ಪಂನ ದ್ರಾವಿಡ ಯೂನಿವರ್ಸಿಟಿಯಲ್ಲಿ ಜುಲೈ 30 ಮತ್ತು 31ರಂದು ಬೃಹತ್ ಪಂಚರಾಜ್ಯಗಳ ದ್ರಾವಿಡ ಗೆಳೆತನ ದಿನಾಚರಣೆ ನಡೆಯಲಿದೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಮತ್ತು ತೆಲಂಗಾಣ ರಾಜ್ಯಗಳ ಜನರು ಭಾಗವಹಿಸಲಿದ್ದಾರೆ.
ಜುಲೈ 30ರಂದು ಬೆಳಿಗ್ಗೆ 11.30ಕ್ಕೆ ಕುಪ್ಪಂ ರೈಲ್ವೆ ನಿಲ್ದಾಣದಿಂದ ಮೆರವಣಿಗೆ, ಮಧ್ಯಾಹ್ನ ಊಟದ ನಂತರ ಸಭಾ ಕಾರ್ಯಕ್ರಮ, ಸಂಜೆ 4.30 ರಿಂದ 7.30ರವರೆಗೂ ದ್ರಾವಿಡ ಬೆಟ್ಟ ಸುತ್ತಾಟ ನಡೆದು ರಾತ್ರಿ 8 ಗಂಟೆಗೆ ಊಟ ಮತ್ತು ಪರಸ್ಪರ ಪರಿಚಯ ನಡೆಯಲಿದೆ.
ಜುಲೈ 31ರಂದು ಬೆಳಿಗ್ಗೆ 6 ರಿಂದ 8.30ರವರೆಗೂ ದ್ರಾವಿಡ ಯೂನಿವರ್ಸಿಟಿಯ ಬಗ್ಗೆ ತಿಳಿದುಕೊಳ್ಳಲು ತಿರುಗಾಟ, ಬೆಳಿಗ್ಗೆ 9.30ಕ್ಕೆ ತಿಂಡಿ, ಬೆಳಿಗ್ಗೆ 10 ರಿಂದ ಮಧ್ಯಾಹ್ನದವರೆಗೂ ಸಭಾ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಈ ಪಂಚ ದ್ರಾವಿಡ ರಾಜ್ಯಗಳ ಭಾಷೆ, ಸಾಹಿತ್ಯ, ಆಚರಣೆಗಳು ಇತ್ಯಾದಿಗಳಲ್ಲಿ ಅನೇಕ ಸಾಮ್ಯತೆಗಳಿವೆ. ಇಲ್ಲಿನ ಜನರ ಬದುಕು, ಸಂಸ್ಕೃತಿಗಳ ನಡುವೆ ಬಹಳ ನಂಟಿದೆ. ಆದರೆ ಗಡಿ, ಭಾಷೆ, ನೆಲ, ಜಲ, ಸಾಹಿತ್ಯ, ಸಂಸ್ಕೃತಿ ಇತ್ಯಾದಿ ವಿವಿಧ ಕಾರಣಗಳನ್ನು ನೀಡಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರಾಜ್ಯಗಳ ನಡುವೆ ಮತ್ತು ಇಲ್ಲಿನ ಜನರ ನಡುವೆ ಕಂದಕ ಸೃಷ್ಟಿಸಲಾಗಿದೆ. ಪರಸ್ಪರ ದ್ವೇಷ ಭಾವನೆ ಮೂಡುವಂತೆ ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ‘ದ್ರಾವಿಡ ಗೆಳೆತನ ದಿನಾಚರಣೆ ಸಂಯೋಜಕರಾದ ಮಂಜುನಾಥ್ ತಿಳಿಸಿದ್ದಾರೆ.