ಒಳಚರಂಡಿ ಕಾರ್ಮಿಕರನ್ನು ಅತ್ಯಂತ ದುರ್ಬಲರಾಗಿ ಕಾಣಲಾಗುತ್ತಿದೆ: ಪೌರಕಾರ್ಮಿಕರ ಮಹಾಸಂಘದ ಭಾಸ್ಕರ್ ಬಾಬು

Prasthutha|

ಬೆಂಗಳೂರು: ಒಳಚರಂಡಿ ಪೌರ ಕಾರ್ಮಿಕರನ್ನು ಅತ್ಯಂತ ದುರ್ಬಲರಾಗಿ ಕಾಣಲಾಗುತ್ತಿದೆ ಮತ್ತು ಸಮಾಜದ ಎಲ್ಲಾ ಸ್ಥರಗಳಲ್ಲೂ ನಮ್ಮನ್ನು ತುಳಿಯಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ರಾಜ್ಯ ಉಪಾಧ್ಯಕ್ಷರಾದ ಭಾಸ್ಕರ್ ಬಾಬು ಅತ್ಯಂತ ದುಃಖದಿಂದ ಬೇಸರ ವ್ಯಕ್ತಪಡಿಸಿದ್ದಾರೆ.‌

ಅವರು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮನದಾಳದ ಮಾತು ಮತ್ತು ತಮಗೆ ಸಮಾಜದಲ್ಲಿ ದೊರಕುತ್ತಿರುವ ನೋವನ್ನು ತಡೆಯಲಾಗದೆ ಮುಖಕ್ಕೆ ಕಪ್ಪು ಬಣ್ಣದ ಬಟ್ಟೆ ಕಟ್ಟಿ ಪೂರ್ತಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

- Advertisement -

ನಾವು ಕಳೆದ ಕೆಲವು ದಿನಗಳ ಹಿಂದೆ ಹಲವು ಬಾರಿ ನಮ್ಮ ಹಕ್ಕುಗಳಿಗಾಗಿ ಪ್ರತಿಭಟಸಿ ಸರಕಾರದ ಮುಂದೆ ನಮ್ಮ ಅಹವಾಲುಗಳನ್ನು ಪೂರೈಸುವಂತೆ ವಿನಂತಿಸಿಕೊಂಡಿದ್ದೆವು. ಆದರೆ ಸರಕಾರ ನಮ್ಮ ಯಾವುದೇ ಬೇಡಿಕೆಗಳಿಗೂ ಸ್ಪಂದಿಸಿಲ್ಲ. ನಮ್ಮ ಮಾತನ್ನು ಕೇಳುವವರು ಯಾರು ಇಲ್ಲ ಎಂಬಂತೆ ನಮಗೆ ಬಾಸವಾಗುತ್ತಿದೆ. ಸಮಾಜದಲ್ಲಿ ನಮ್ಮನ್ನು ಬಹಳಷ್ಟು ಕೀಳು ಮಟ್ಟದಲ್ಲಿ ಚಿತ್ರಿಸಲಾಗುತ್ತಿದೆ. ಇದು ಮನಸ್ಸಿಗೆ ಅತ್ಯಂತ ನೋವು ಕೊಡುತ್ತದೆ. ನಾವು ಮನುಷ್ಯರು. ‌ನಮಗೂ ಹೃದಯವಿದೆ. ನಿಮ್ಮ ಬೇಕು ಬೇಡಗಳಿಗೆ ನಾವು ಸ್ಪಂದಿಸುತ್ತಾ ಬಂದಿದ್ದೇವೆ.‌ ಆದರೆ ನಮ್ಮನ್ನು ಯಾಕೆ ಗುಲಾಮರನ್ನಾಗಿ ನೋಡುತ್ತಿದ್ದೀರಿ.‌ ನಾವು ಪ್ರಾಣಿಗಳಲ್ಲ ಮನುಷ್ಯರು. ಪ್ರಾಣಿಗಳಿಗಿಂತಲೂ ಕೀಳಾಗಿ ನಮ್ಮನ್ನು ನೋಡಲಾಗುತ್ತಿದೆ. ಪರಿಶಿಷ್ಟ ಜಾತಿಯ ಅಸ್ಪ್ರಶ್ಯತೆಯಲ್ಲಿಯೇ ಮಹಾ ಅಸ್ಪ್ರಶ್ಯತೆಯಲ್ಲಿ ಬದುಕುವ ಈ ಜನಾಂಗದವರ ಬಗ್ಗೆ ಯೋಚಿಸಿದವರಿಲ್ಲ. ಈ ಜನಾಂಗವು ಇಂದೂ ಕಗ್ಗತ್ತಲಿನಲ್ಲಿ ವಾಸಿಸುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮ್ಯಾನುವೆಲ್ ಸ್ಕ್ಯಾವೆಂಜರ್ ಗಳಿಗೆ ಸಂಬಂಧಿಸಿದ ರಾಜಕೀಯ ಸ್ಥಾನಮಾನವನ್ನು ಅನ್ಯ ಜನಾಂಗದವರಿಗೆ ನೀಡುವುದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ ಬದ್ದ ಹಕ್ಕು ಹಗಲು ದರೋಡೆಯಾಗುತ್ತಿದ್ದು, ವಂಚನೆಗೊಳಗಾದ ಜನಾಂಗಕ್ಕೆ ರಾಜಕೀಯವಾಗಿ ಪ್ರೋತ್ಸಾಹಿಸಿ ಎಂದು ಇದೇ ಸಂದರ್ಭ ಅವರು ವಿನಂತಿಸಿಕೊಂಡಿದ್ದಾರೆ.

- Advertisement -