ಪೋಕ್ಸೋ ಕಾಯಿದೆಯಡಿ ಸ್ಕಾರ್ಫ್ ಅಥವಾ ಕೈ ಎಳೆಯುವುದು ಲೈಂಗಿಕ ದೌರ್ಜನ್ಯವಾಗದು: ಕಲ್ಕತ್ತಾ ಹೈಕೋರ್ಟ್

Prasthutha|

ನವದೆಹಲಿ: ಅಪ್ರಾಪ್ತ ಬಾಲಕಿಯ ಸ್ಕಾರ್ಫ್‌ ಎಳೆಯುವುದು, ಆಕೆಯ ಕೈ ಸೆಳೆಯುವುದು ಮತ್ತು ಮದುವೆ ಪ್ರಸ್ತಾಪ ಮಾಡುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಲೈಂಗಿಕ ಕಿರುಕುಳದ ವ್ಯಾಪ್ತಿಗೆ ಬರುವುದಿಲ್ಲ [ನುರೈ ಎಸ್‌ ಕೆ ಅಲಿಯಾಸ್‌ ನೂರುಲ್ ಎಸ್‌ ಕೆ. ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ] ಎಂದು ಕಲ್ಕತ್ತಾ ಹೈಕೋರ್ಟ್‌ ಹೇಳಿದೆ.

- Advertisement -

ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಆರೋಪಿ ಸಂತ್ರಸ್ತೆಯ ಸ್ಕಾರ್ಫ್ ಎಳೆದು ಕೈ ಸೆಳೆದು ಮದುವೆಯ ಪ್ರಸ್ತಾಪ ಮಾಡಿದ್ದಾರೆ ಎಂದು ಭಾವಿಸಿದರೂ, ಅಂತಹ ಕೃತ್ಯಗಳು ಪೋಕ್ಸೋ ಸೆಕ್ಷನ್ 7ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯದ ವ್ಯಾಖ್ಯಾನದೊಳಗೆ ಬರುವುದಿಲ್ಲ ಎಂದು ನ್ಯಾ. ಬಿಬೇಕ್‌ ಚೌಧುರಿ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

ಹೆಚ್ಚೆಂದರೆ ಐಪಿಸಿ ಸೆಕ್ಷನ್‌ 506 (ಕ್ರಿಮಿನಲ್ ಬೆದರಿಕೆ) ಹಾಗೂ ಐಪಿಸಿ ಸೆಕ್ಷನ್‌ 354- ಎ (ಲೈಂಗಿಕ ಕಿರುಕುಳ) ಅಡಿಯ ಅಪರಾಧಗಳಿಗೆ ಮಾತ್ರ ಆರೋಪಿಯನ್ನು ಹೊಣೆ ಮಾಡಬಹುದು ಎಂದು ನ್ಯಾಯಾಲಯ ತೀರ್ಪು ನೀಡಿತು.

- Advertisement -

ಪೋಕ್ಸೊ ಕಾಯಿದೆಯ ಸೆಕ್ಷನ್ 8 (ಅಪ್ರಾಪ್ತ ವಯಸ್ಕನ ಲೈಂಗಿಕ ದೌರ್ಜನ್ಯ) ಮತ್ತು 12 (ಲೈಂಗಿಕ ಕಿರುಕುಳ) ಮತ್ತು ಐಪಿಸಿ ಸೆಕ್ಷನ್ 354 (ಹೆಣ್ಣಿನ ವಿರುದ್ಧ ಕ್ರೌರ್ಯ), 354 ಎ (ಲೈಂಗಿಕ ಕಿರುಕುಳ), ), 506 (ಅಪರಾಧ ಬೆದರಿಕೆ) ಅಡಿಯ ಅಪರಾಧಗಳಿಗಾಗಿ ಆರೋಪಿಯನ್ನು ಅಪರಾಧಿ ಎಂದು ವಿಚಾರಣಾ ನ್ಯಾಯಾಲಯ ಪರಿಗಣಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

(ಕೃಪೆ: ಬಾರ್ ಆ್ಯಂಡ್ ಬೆಂಚ್)



Join Whatsapp