ಹಿರಿಯ ಕವಿ ಡಾ. ವಿ.ಸಿ. ಐರಸಂಗ ಇನ್ನಿಲ್ಲ

Prasthutha|

ಧಾರವಾಡ : ಅಭಿಮಾನದಿಂದ ‘ಐರಸಂಗ ಕಾಕಾ’ ಎಂದೇ ಜನಪ್ರಿಯರಾಗಿದ್ದ ಕವಿ ಡಾ. ವಿ.ಸಿ. ಐರಸಂಗ (91) ಇಂದು ನಿಧನರಾಗಿದ್ದಾರೆ.

- Advertisement -

ಆಕಾಶವಾಣಿಯಲ್ಲಿ ಭಾವಸಂಗಮದ ಹಾಡುಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತರಾಗಿದ್ದ ಐರಸಂಗ ಅವರು ವಯೋ ಸಹಜ ವೈದ್ಯಕೀಯ ಸಮಸ್ಯೆಗಳಿಂಬ ಬಳಲುತ್ತಿದ್ದರು. ಅವರಿಗೆ ಮಗ, ಮಗಳು ಮೊಮ್ಮಕ್ಕಳಿದ್ದಾರೆ.

ಹೊಸ ಯಲ್ಲಾಪುರ ರುದ್ರಭೂಮಿಯಲ್ಲಿ ಇಂದೇ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

- Advertisement -

ಸುಮಾರು ಆರು ದಶಕಗಳ ಕಾಲ ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿರುವ ಐರಸಂಗ ಅವರು 50ಕ್ಕೂ ಹೆಚ್ಚು ಕವನ ಸಂಕಲನಗಳನ್ನು ರಚಿಸಿದ್ದರು. ಮಾರುತಿ ಪ್ರಕಾಶನ ಸಂಸ್ಥೆಯನ್ನು ಅವರು ಸ್ಥಾಪಿಸಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕಾರ ಅವರು ಪಡೆದಿದ್ದರು. ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದಾಗ, ಬಡತನದ ಹಿನ್ನೆಲೆಯ ಅವರು ಸೈಕಲ್ ನಲ್ಲೇ ಬಂದು ಗಮನ ಸೆಳೆದಿದ್ದರು.

ಸದಾಕಾಲ ಸೈಕಲ್ ನೊಂದಿಗೇ ಜೀವನ ಸಾಗಿಸುತ್ತಿದ್ದ ಅವರನ್ನು ‘ಸೈಕಲ್ ಕವಿ’ ಎಂದೂ ಕರೆಯುತ್ತಿದ್ದರು.

Join Whatsapp