ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್‌ ಅಧ್ಯಕ್ಷರಾಗಿ ಡಾ.ಯುಟಿ ಇಫ್ತಿಕಾರ್ ನೇಮಕ

Prasthutha|

ಬೆಂಗಳೂರು: ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್ ರಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಡಾ.ಎಂ.ವಿ. ಶೆಟ್ಟಿ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಯು.ಟಿ.ಇಫ್ತಿಕಾರ್ ಫರೀದ್ ಅವರನ್ನು ನೂತನ ಅಧ್ಯಕ್ಷರಾಗಿ ರಾಜ್ಯ ಸರಕಾರ ನೇಮಿಸಿದೆ.

- Advertisement -

ನ್ಯಾಷನಲ್ ಕಮಿಷನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಪ್ರೊಫೆಷನ್ಸ್ ಆ್ಯಕ್ಟ್-2021 ರಡಿ ಈ ಹೊಸ ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್ ರಚಿಸಲಾಗಿದೆ.

ಸಾಮಾಜಿಕ, ರಾಜಕೀಯ, ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಡಾ.ಯು.ಟಿ.ಇಫ್ತಿಕಾರ್ ಫರೀದ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸಿಂಡಿ ಕೇಟ್ ಸದಸ್ಯರಾಗಿ, ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್ ಇದರ ರಾಜ್ಯಾಧ್ಯಕ್ಷರಾಗಿ, ಸ್ಪೋರ್ಟ್ಸ್ ಆ್ಯಂಡ್ ಫಿಟೈಸ್ ಟೈನಿಂಗ್ ಫೆಡೆರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಹಾಗೂ ಯು.ಟಿ.ಫರೀದ್ ಫೌಂಡೇಶನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.



Join Whatsapp