ಉಪ್ಪಿನಂಗಡಿಯ ಡಾ| ನೈನಾ ಫಾತೀಮಾ ಬರೆದಿರುವ ಪ್ರಬಂಧಕ್ಕೆ ಅಂತಾರಾಷ್ಟ್ರೀಯ ಯುವ ಅತ್ಯುತ್ತಮ ಸಂಶೋಧಕ ಪ್ರಶಸ್ತಿ

Prasthutha|

ಬೆಂಗಳೂರು: ಮಂಗಳೂರಿನ ಡಾ| ನೈನಾ ಫಾತೀಮಾ ಅವರ ನಾಲೆಜ್ ಅಟ್ಟಿಟುಡ್ ಆ್ಯಂಡ್ ಪ್ರಾಕ್ಟೀಸ್ ಆಫ್ ಆಶಾ ವರ್ಕರ್ಸ್ ಟೂವಾರ್ಡ್ಸ್ ಹೈಪರ್ ಟೆನ್ಶನ್ ಇನ್ ಪ್ರಿಗ್ನನ್ಸಿ ಎಂಬ ಪ್ರಬಂಧಕ್ಕೆ ಅತ್ಯುತ್ತಮ ವೈಜ್ಞಾನಿಕ ಯುವ ಸಂಶೋಧಕ ಪ್ರಶಸ್ತಿ ಲಭಿಸಿದೆ.

- Advertisement -


ಬೆಂಗಳೂರಿನ ಶೆರೇಟನ್ ಹೋಟೆಲ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ದಿ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ದ ಸ್ಟಡಿ ಆಫ್ ಹೈಪರ್ಟೆನ್ಶನ್ ಇನ್ ಪ್ರೆಗ್ನನ್ಸಿ ಹಾಗು ದ ಸೊಸೈಟಿ ಫಾರ್ ಮೆಟರ್ನಲ್ ಫೀಟಲ್ ಮೆಡಿಸಿನ್ (ಇಂಡಿಯಾ) ಸಹಭಾಗಿತ್ವದಲ್ಲಿ ನಡೆದ ಕಾನ್ಫನ್ಸ್ ನಲ್ಲಿ ಡಾ| ನೈನಾ ಫಾತೀಮಾ ಅವರಿಗೆ ಪ್ರಶಸ್ತಿ ಬಂದಿದೆ.


ಡಾ|ನೈನಾ ಫಾತೀಮಾ ಪ್ರಸ್ತುತ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.
ಇವರು ಉಪ್ಪಿನಂಗಡಿಯ ಮಠ ನಿವಾಸಿ ಶೌಕತ್ ಅಲಿ ಹಾಗು ಆಯಿಷಾ ಎಂ ಬಿ ದಂಪತಿಗಳ ಪುತ್ರಿಯಾಗಿದ್ದಾರೆ.



Join Whatsapp