ಬೆಂಗಳೂರು: ಪಾಲೆಸ್ತೀನ್ ವಿರೋಧಿ ಸ್ಟೇಟಸ್ ಹಾಕಿದ ಕರ್ನಾಟಕ ಮೂಲದ ವೈದ್ಯರೊಬ್ಬರನ್ನು ಬಹರೈನ್ ನಲ್ಲಿ ಉದ್ಯೋಗದಿಂದ ವಜಾಗೊಳಿಸಲಾಗಿದೆ.
ಡಾ.ಸುನೀಲ್ ಜೆ. ರಾವ್ ಎಂಬ ಉದ್ಯೋಗ ಕಳೆದುಕೊಂಡ ವೈದ್ಯರಾಗಿದ್ದಾರೆ.
ಇವರು ಬಹರೈನ್ ನ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ಯಾಲೆಸ್ತೀನಿಯರ ವಿರುದ್ಧ ಎಕ್ಸ್ ನಲ್ಲಿ ಸ್ಟೇಟಸ್ ಪೋಸ್ಟ್ ಮಾಡಿದ್ದರು. ಆದರೆ ಬಳಿಕ ಸ್ಟೇಟಸ್ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದರು.
ನನ್ನ ಮಾತು ಮತ್ತು ಕಾರ್ಯಗಳಿಗಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ. ನಾನು ಈ ವೇದಿಕೆಯಲ್ಲಿ ಪೋಸ್ಟ್ ಮಾಡಿದ ಹೇಳಿಕೆಗಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ಪ್ರಸ್ತುತ ಘಟನೆಯ ಸಂದರ್ಭದಲ್ಲಿ ಇದು ಸಂವೇದನಾರಹಿತವಾಗಿತ್ತು. ವೈದ್ಯನಾಗಿ ಎಲ್ಲ ಜೀವಗಳು ಮುಖ್ಯವೆಂದು ಹೇಳುತ್ತೇನೆ ಎಂದು ಡಾ.ಸುನೀಲ್ ಕ್ಷಮೆ ಯಾಚಿಸಿದ್ದರು. ಅಲ್ಲದೆ ನಾನು ಕಳೆದ ಹತ್ತು ವರ್ಷಗಳಿಂದ ಇಲ್ಲಿದ್ದು, ಈ ದೇಶ, ದೇಶದ ಜನರು ಮತ್ತು ಧರ್ಮವನ್ನು ಗೌರವಿಸುತ್ತೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಆದರೆ ಸಮಾಜಕ್ಕೆ ಅಹಿತವಾದ ಸ್ಟೇಟಸ್ ಹಾಕಿರುವುದರಿಂದ ತಕ್ಷಣವೇ ಜಾರಿಗೆ ಬರುವಂತೆ ಅವರನ್ನು ಉದ್ಯೋಗದಿಂದ ವಜಾಗೊ ಳಿಸಲಾಗಿದೆ ಎಂದು ದ ರಾಯಲ್ ಬಹರೈನ್ ಆಸ್ಪತ್ರೆ ತಿಳಿಸಿದೆ.