ಡಾ.ಸದಾನಂದ ಪೂಜಾರಿಗೆ ಐ.ಎಂ.ಎ ಪ್ರಶಸ್ತಿ

Prasthutha|

ಮಂಗಳೂರು: ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆಯಿಂದ ನೀಡಲಾಗುವ 2021-22 ನೇ ಸಾಲಿನ “ಬೆಸ್ಟ್ ಸೆಕ್ರೆಟರಿ” ಪ್ರಶಸ್ತಿಗೆ ವೆನ್ಲಾಕ್ ಜಿಲ್ಲಾಸ್ಪತ್ರೆಯ ಯುರೋಲಜಿಸ್ಟ್ ಡಾ.ಸದಾನಂದ ಪೂಜಾರಿ ಆಯ್ಕೆಯಾಗಿದ್ದಾರೆ.

- Advertisement -

ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿರುವ ಡಾ.ಸದಾನಂದ ಪೂಜಾರಿ ಅವರು ಅಸೋಸಿಯೇಟ್ ಪ್ರೊಫೆಸರ್ ಹಾಗೂ  ಡಿ ಎನ್ ಬಿ ಟೀಚರ್ ಆಗಿದ್ದಾರೆ.

ಭಾರತೀಯ ವೈದ್ಯಕೀಯ ಸಂಘ ಬೆಂಗಳೂರು ಇದರ ವಾರ್ಷಿಕ ವೈದ್ಯಕೀಯ ಸಮಾವೇಶ ಅಕ್ಟೋಬರ್ 28,29 ಮತ್ತು 30ರಂದು ಮೂಡಬಿದಿರೆಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿರುವುದು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಸೇರಿದಂತೆ ಗಣ್ಯಾತಿಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Join Whatsapp