ದಂಪತಿ ಜೊತೆ ಅತ್ತೆ-ಮಾವ ವಾಸವಿಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಸೂಕ್ತವಲ್ಲ: ನ್ಯಾಯಾಲಯ

Prasthutha|

ವರದಕ್ಷಿಣೆ ಕಿರುಕುಳ ಪ್ರಕರಣವೊಂದರಲ್ಲಿ ಅತ್ತೆ-ಮಾವನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನುಇತ್ತೀಚೆಗೆ ರಾಜಸ್ಥಾನ ಹೈಕೋರ್ಟ್‌ ರದ್ದುಪಡಿಸಿದೆ. ಬೇರ್ಪಟ್ಟಿರುವ ದಂಪತಿಯೊಟ್ಟಿಗೆ ಅತ್ತೆ-ಮಾವ ಬಹುತೇಕವಾಗಿ ನೆಲೆಸಿರಲಿಲ್ಲ. ಹೀಗಾಗಿ, ಇದು ಅನಗತ್ಯ ಪರಿಣಾಮಗಳನ್ನು ಬೀರುವಂತಹ ಸ್ಪಷ್ಟ ಪ್ರಕರಣವಾಗಿದೆ ಎಂದು ಇತ್ತೀಚೆಗೆ ರಾಜಸ್ಥಾನ ಹೈಕೋರ್ಟ್ ಹೇಳಿದೆ.

- Advertisement -

ಇದಕ್ಕಾಗಿ ಹರಿ ರಾಮ್‌ ಶರ್ಮಾ ಮತ್ತು ಇತರರು ವರ್ಸಸ್‌ ರಾಜ್ಯಸ್ಥಾನ ಸರ್ಕಾರ ಮತ್ತೊಬ್ಬರು ಪ್ರಕರಣವನ್ನು ನ್ಯಾಯಮೂರ್ತಿ ಪುಷ್ಪೇಂದ್ರ ಸಿಂಗ್‌ ಭಾಟಿ ಆಧರಿಸಿದ್ದಾರೆ.

ವೈವಾಹಿಕ ಪ್ರಕರಣಗಳಲ್ಲಿ ಗಂಡನ ಎಲ್ಲಾ ಹತ್ತಿರದ ಸಂಬಂಧಿಗಳನ್ನು ದೂರಿನಲ್ಲಿ ಸೇರಿಸುವುದು ಹೊಸತೆನಲ್ಲ ಎಂದು ಹೈಕೋರ್ಟ್ ಹೇಳಿದೆ. “… “ದಂಪತಿಯು ಅತ್ತೆ-ಮಾವನ ಜೊತೆ ನೆಲೆಸಿಲ್ಲ ಎಂದಾದರೆ ಮತ್ತು ಆರೋಪಗಳು ಪತಿಯ ಮೇಲೆ ಮಾತ್ರವೇ ಕೇಂದ್ರೀಕೃತವಾಗಿದ್ದರೆ ಅತ್ತೆ-ಮಾವ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದು ಸೂಕ್ತವಲ್ಲ” ಎಂದಿರುವ ನ್ಯಾ. ಭಾಟಿ ಅವರು ಹರಿ ರಾಮ್‌ ಶರ್ಮಾ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.

- Advertisement -

ಪ್ರಕರಣದ ಹಿನ್ನೆಲೆ: ವಿವಾಹದ ಬಳಿಕ ದಂಪತಿಯು ಬ್ಯಾಂಕಾಕ್‌ನಲ್ಲಿ ನೆಲೆಸಿದ್ದರು. ಪತ್ನಿಯು ಆಗಾಗ್ಗೆ ಅತ್ತೆ-ಮಾವ ಅವರನ್ನು ಕಾಲಕಾಲಕ್ಕೆ ಭೇಟಿ ಮಾಡುತ್ತಿದ್ದರು. ಆದರೆ ಆಕೆ ಕೆಲವು ದಿನಗಳು ಮಾತ್ರವೇ ಅತ್ತೆ-ಮಾವಂದಿರ ಜೊತೆ ನೆಲೆಸಿದ್ದರು ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.

2019ರಲ್ಲಿ ಪತ್ನಿಯು ಅತ್ತೆ-ಮಾವ ಅವರನ್ನು ಬ್ಯಾಂಕಾಕ್‌ಗೆ ಆಹ್ವಾನಿಸಿದ್ದರು. ಇದಾದ ಕೆಲ ತಿಂಗಳ ನಂತರವಷ್ಟೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 406 (ನಂಬಿಕೆದ್ರೋಹ), 498-ಎ (ಮಹಿಳೆಯ ಮೇಲೆ ಹಲ್ಲೆ), 313 (ಗರ್ಭಪಾತಕ್ಕೆ ಕಾರಣವಾಗುವುದು) ಮತ್ತು 377ರ (ಅಸಹಜ ಅಪರಾಧಗಳು) ಅಡಿ ದೂರು ದಾಖಲಿಸಲಾಗಿತ್ತು.

ವಾಟ್ಸಾಪ್‌ ಸಂಭಾಷಣೆಗಳನ್ನು ಪರಿಶೀಲಿಸಿರುವ ನ್ಯಾಯಮೂರ್ತಿಗಳು ಪತಿ-ಪತ್ನಿಯರ ನಡುವೆ ವೈವಾಹಿಕ ಅಸಂಗತತೆ ಉಂಟಾದ ನಂತರವೇ ಅತ್ತೆ-ಮಾವಂದಿರ ವಿರುದ್ಧ ಆಕೆ ಪೂರ್ವಾನ್ವಯವಾಗುವಂತೆ ಆರೋಪ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದ್ದಾರೆ.

ಸೊಸೆಯನ್ನು ಮನೆಯಿಂದ ಹೊರಹಾಕಲಾಗಿತ್ತು, ಸುಳ್ಳುಗಳನ್ನು ಹೇಳಿ ವಿವಾಹ ಮಾಡಲಾಗಿತ್ತು, ವರದಕ್ಷಿಣೆಗಾಗಿ ಪೀಡಿಸಲಾಗುತ್ತಿತ್ತು ಎಂಬ ಆರೋಪಗಳನ್ನು ಅತ್ತೆ-ಮಾವನ ವಿರುದ್ಧ ಮಾಡಲಾಗಿತ್ತು. ಆದರೆ, ಈ ಆರೋಪಗಳು ಚದುರಿದಂತಿದ್ದು, ಅಸ್ಪಷ್ಟವಾಗಿವೆ. ಈ ಸಂಬಂಧ ಯಾವುದೇ ನಿರ್ದಿಷ್ಟ ಪ್ರಕರಣವನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿಲ್ಲ ಎಂಬುದನ್ನು ಪೀಠ ಗಮನಿಸಿತು.

“ಪ್ರಸ್ತುತ ದೂರುದಾರೆಯಾದ ಪತ್ನಿಯಿಂದ ವಯಸ್ಸಾದ ಮತ್ತು ಅನಾರೋಗ್ಯದಿಂದಿರುವ ಅತ್ತೆ-ಮಾವಂದಿರನ್ನು ಪ್ರಕರಣದಲ್ಲಿ ಒಳಗೊಳ್ಳುವುದು ವೈವಾಹಿಕ ವಿವಾದದ ವಿಸ್ತರಣೆಯಾಗಿದ್ದು ಆ ಮೂಲಕ ಅನಗತ್ಯ ಒತ್ತಡ ಹೇರುವ ಗುರಿ ಹೊಂದಿದೆ” ಎಂದು ನ್ಯಾಯಾಲಯ ಹೇಳಿದೆ.

ದೂರನ್ನು ಪರಿಗಣಿಸಿದರೂ ಆಗಾಗ್ಗೆ ಭೇಟಿ ನೀಡುವುದನ್ನು ಹೊರತುಪಡಿಸಿ ದೂರುದಾರೆ ಪತ್ನಿಯು ಅತ್ತೆ-ಮಾವಂದಿರ ಜೊತೆ ನೆಲೆಸಿರಲೇ ಇಲ್ಲ ಎಂಬುದನ್ನು ಗಮನಕ್ಕೆ ತಂದುಕೊಂಡಿರುವ ಪೀಠವು ಆರೋಪಗಳು ಪತಿಯ ವಿರುದ್ಧವೇ ಹೊರತು ಅತ್ತೆ-ಮಾವಂದಿರ ವಿರುದ್ಧವಲ್ಲ” ಎಂದಿದೆ.

“ದೂರದಲ್ಲಿ ನೆಲೆಸಿರುವ ಸಂಬಂಧಗಳ ಮೇಲೆ, ಪ್ರಸ್ತುತ ಪ್ರಕರಣದಲ್ಲಿ ಪ್ರಶ್ನಾರ್ಹವಾಗಿರುವ ಎಫ್‌ಐಆರ್‌ನಲ್ಲಿ ಅತ್ತೆ-ಮಾವನ ವಿರುದ್ಧ ಮಾಡಲಾಗಿರುವಂಥ ಆರೋಪಗಳನ್ನು ಹೊರಿಸುವುದು ಮೇಲ್ನೋಟಕ್ಕೆ ಸಾಧ್ಯವಿಲ್ಲ. ಅರ್ಜಿದಾರ ಪತಿಯ ವಿರುದ್ಧ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿರುವ ವಿಚಾರಗಳು ಸತ್ಯವಾಗಿರಬಹುದು. ಆದರೆ, ಅದೇ ಆರೋಪಗಳನ್ನು ಅರ್ಜಿದಾರರು/ಅತ್ತೆ-ಮಾವಂದಿರ ವಿರುದ್ಧ ಮಾಡಲಾಗದು. ಇದು ಸಂಪೂರ್ಣವಾಗಿ ನ್ಯಾಯಿಕ ಪ್ರಕ್ರಿಯೆಯ ದುರ್ಬಳಕೆಯಾಗಿದೆ” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಹೀಗಾಗಿ, ಅತ್ತೆ-ಮಾವಂದಿರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಗಿದ್ದು, ಪತಿಯ ವಿರುದ್ಧದ ದೂರಿನಲ್ಲಿ ಮಧ್ಯಪ್ರವೇಶಿಸಿಲ್ಲ.

(ಕೃಪೆ: ಬಾರ್ & ಬೆಂಚ್)

Join Whatsapp