ವರದಕ್ಷಿಣೆ ಕಿರುಕುಳ: ಕೊಡಗು ಜಿ.ಪಂ ಸಿಇಓ ವಿರುದ್ಧ ಪತ್ನಿ ದೂರು

Prasthutha|

ಬೆಂಗಳೂರು: ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಐಎಎಸ್ ಅಧಿಕಾರಿ ವಿರುದ್ಧ ಪತ್ನಿ ಬೆಂಗಳೂರಿನ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -


ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್ ವಿರುದ್ಧ ಪತ್ನಿ ದೂರು ನೀಡಿದ್ದಾರೆ.


2022ರಲ್ಲಿ ಆಕಾಶ್ ನಿವೃತ್ತ ಡಿಐಜಿ ಪುತ್ರಿ ಜೊತೆ ವಿವಾಹವಾಗಿದ್ದರು. ಆದರೆ ಐಎಎಸ್ ಅಧಿಕಾರಿ ಆಕಾಶ್ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಅಷ್ಟೇ ಅಲ್ಲದೇ ವರದಕ್ಷಿಣೆ ನೀಡಲು ಒಪ್ಪದಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

- Advertisement -


ಘಟನೆಗೆ ಸಂಬಂಧಿಸಿ ಆಕಾಶ್, ತಂದೆ- ತಾಯಿ ಹಾಗೂ ಸಹೋದರನ ವಿರುದ್ಧ ಎಫ್ ಐಆರ್ ದಾಖಲಾಗಿದೆ.



Join Whatsapp