ವರದಕ್ಷಿಣೆ ಕಿರುಕುಳ: 21 ವರ್ಷದ ವಿವಾಹಿತೆ ಆತ್ಮಹತ್ಯೆ

Prasthutha|

ತ್ರಿಶೂರ್: ವರದಕ್ಷಿಣೆ ಮತ್ತು ಕೌಟುಂಬಿಕ ಕಿರುಕುಳಕ್ಕೆ ಬೇಸತ್ತು 21 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದು ಬುಧವಾರ ಮೃತಪಟ್ಟಿದ್ದಾಳೆ.

- Advertisement -

ಮೃತಪಟ್ಟ ಯುವತಿಯನ್ನು ಕರುಪದಣ್ಣ ಮೂಲದ ಅಫ್ಸಾನಾ ಎಂದು ಗುರುತಿಸಲಾಗಿದೆ.

ಆಕೆಯ ಪತಿ ಅಮಲ್ ನನ್ನು ಕೊಟ್ಟಂಕುಳಂನಲ್ಲಿ ಪೊಲೀಸರು ಬಂಧಿಸಿದ್ದು, ಆತನನ್ನು ವಶಕ್ಕೆ ಪಡೆದಿದ್ದಾರೆ.

- Advertisement -

ಅಫ್ಸಾನಾ ಮತ್ತು ಅಮಲ್ ಪ್ರೀತಿಸಿ ಮದುವೆಯಾಗಿದ್ದರು ಮತ್ತು ಪೋಷಕರ ಅನುಮತಿಯಿಲ್ಲದೆ ಒಂದೂವರೆ ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಅಂದಿನಿಂದ ಅವರು ಮೂನ್ನುಪೀಡಿಕಾದ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದು, ವರದಕ್ಷಿಣೆಯ ಹೆಸರಿನಲ್ಲಿ ಅಮಲ್ ಅಫ್ಸಾನಾ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆಗಸ್ಟ್ 1 ರಂದು ಫ್ಲಾಟ್ ನಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ನಂತರ ಅಫ್ಸಾನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಫ್ಸಾನಾ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಅಮಲ್ ನನ್ನು ಬಂಧಿಸಲಾಗಿದೆ ಮತ್ತು ಪೊಲೀಸರು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Join Whatsapp