ಯುಪಿ ಎಕ್ಸ್ ಪ್ರೆಸ್ ವೇಯಲ್ಲಿ ಡಬಲ್ ಡೆಕ್ಕರ್ ಬಸ್ ಗಳ ಡಿಕ್ಕಿ: 8 ಸಾವು

Prasthutha|

ಬಾರಾಬಂಕಿ(ಉತ್ತರ ಪ್ರದೇಶ) : ನಿಲ್ಲಿಸಿದ್ದ ಡಬಲ್ ಡೆಕ್ಕರ್ ಬಸ್ ಗೆ ವೇಗವಾಗಿ ಬಂದ ಡಬಲ್ ಡೆಕ್ಕರ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಆರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಡಜನ್ ಗೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯ ಪೂರ್ವಾಂಚಲ ಎಕ್ಸ್ ಪ್ರೆಸ್ ವೇಯಲ್ಲಿ ನಡೆದಿದೆ.

- Advertisement -

ಗಾಯಗೊಂಡವರನ್ನು ಸಿಎಚ್ ಸಿ ಹೈದರ್ ಗಡ್ ಗೆ ದಾಖಲಿಸಲಾಗಿದ್ದು, ಗಂಭೀರ ಗಾಯಗೊಂಡವರನ್ನು ಲಕ್ನೋದ ಟ್ರಾಮಾ ಸೆಂಟರ್ ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಮುಂಜಾನೆ ಲೋನಿಕ್ಟ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ನರೇಂದ್ರಪುರ ಮದ್ರಾಹಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.

- Advertisement -

ಎರಡೂ ಡಬಲ್ ಡೆಕ್ಕರ್ ಬಸ್ಸುಗಳು ಬಿಹಾರದ ಸೀತಾಮರ್ಹಿ ಮತ್ತು ಸುಪೌಲ್ ನಿಂದ ದೆಹಲಿಗೆ ಹೋಗುತ್ತಿದ್ದವು.

ಎಎಸ್ಪಿ ಮನೋಜ್ ಪಾಂಡೆ ಸೇರಿದಂತೆ ಪೊಲೀಸರು ಮತ್ತು ರಕ್ಷಣಾ ತಂಡವು ಸ್ಥಳದಲ್ಲಿ ಉಪಸ್ಥಿತರಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯ ಮುಂದುವರೆದಿದೆ.



Join Whatsapp