ಟಿಎಂಸಿಯೊಂದಿಗಿನ ಮೈತ್ರಿಗೆ ಬಾಗಿಲು ತೆರೆದೇ ಇದೆ: ಕಾಂಗ್ರೆಸ್

Prasthutha|

ಪಾಟ್ನಾ: ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಕ್ಷೇತ್ರಗಳಲ್ಲಿ ಸ್ರ್ಪಧಿಸಲು ತೃಣಮೂಲ ಕಾಂಗ್ರೆಸ್ ನಿರ್ಧರಿಸಿದ್ದರೂ, ಟಿಎಂಸಿಯೊಂದಿಗೆ ಮೈತ್ರಿಗೆ ನಮ್ಮ ಬಾಗಿಲು ತೆರೆದೇ ಇದೆ ಎಂದು ಕಾಂಗ್ರೆಸ್ ಹೇಳಿದೆ.

- Advertisement -

ಪಾಟ್ನಾದಲ್ಲಿ ಪ್ರತಿಪಕ್ಷಗಳ ಮೊದಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಪಕ್ಷದ ಈ ತೀರ್ಮಾನವನ್ನು ಮಾಧ್ಯಮಗಳಿಗೆ ತಿಳಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂಡಿಯಾ ಒಕ್ಕೂಟದ ಮೈತ್ರಿಯಲ್ಲಿದ್ದೇನೆ ಎಂದು ಹೇಳಿದ್ದರು. ಬಿಜೆಪಿಯನ್ನು ಸೋಲಿಸುವುದು ಅವರ ಆದ್ಯತೆಯಾಗಿದೆ ಎಂದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

ನಾವು ಯಾವುದೇ ಬಾಗಿಲು ಮುಚ್ಚಿಲ್ಲ. ಅವರು ಎಲ್ಲಾ 42 ಸ್ಥಾನಗಳಿಗೆ (ಪಶ್ಚಿಮ ಬಂಗಾಳದಲ್ಲಿ) ಸ್ರ್ಪಧಿಸುವುದಾಗಿ ಏಕಪಕ್ಷೀಯವಾಗಿ ಘೋಷಿಸಿದ್ದಾರೆ. ನಮಗೆ ಸಂಬಂಧಪಟ್ಟಂತೆ, ಮಾತುಕತೆಗಳು ಇನ್ನೂ ಮುಂದುವರೆದಿದೆ. ಬಾಗಿಲುಗಳು ಇನ್ನೂ ತೆರೆದಿವೆ ಜೈರಾಮ್ ರಮೇಶ್ ಎಂದಿದ್ದಾರೆ.

- Advertisement -

ಇದು ಅತ್ಯಂತ ಮಹತ್ವದ ರಾಜಕೀಯ ರ್ಯಾಲಿಯಾಗಿದ್ದು, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಸೋಲಿಸಲು ಪ್ರತಿಪಕ್ಷಗಳ ಒಗ್ಗಟ್ಟನ್ನು ತೋರಿಸುತ್ತದೆ ಎಂದು ಅವರು ಹೇಳಿದರು.



Join Whatsapp