ಯಾವ ಗುರೂಜಿಗಳು ಭವಿಷ್ಯ ನುಡಿಯೋದು ಬೇಕಿಲ್ಲ, ನಮ್ಮ ಸರ್ಕಾರ ಸುಭದ್ರವಾಗಿದೆ: ಡಿಕೆ ಶಿವಕುಮಾರ್

Prasthutha|

ಬೆಂಗಳೂರು: ನಮ್ಮ ಸರ್ಕಾರ ಸುಭದ್ರವಾಗಿದೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಕೆಲಸ ಮಾಡ್ತಿದ್ದಾರೆ. ಯಾವ ಸ್ವಾಮೀಜಿ, ಗುರೂಜಿಗಳು ಭವಿಷ್ಯ ನುಡಿಯೋದು ಬೇಕಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

- Advertisement -


ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻಇದೇ ಅವಧಿಯಲ್ಲಿ ಡಿಕೆಶಿ ಸಿಎಂ ಆಗ್ತಾರೆʼ ಎಂಬ ವಿನಯ್ ಗುರೂಜಿ ಭವಿಷ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಾನು ಎಲ್ಲಾ ಸ್ವಾಮೀಜಿ, ಗುರೂಜಿಗಳಿಗೆ ವಿನಂತಿ ಮಾಡ್ತೀನಿ. ನಮ್ಮ ಸರ್ಕಾರದ ವಿಚಾರದಲ್ಲಿ ತಮ್ಮ ಯಾವ ಹೇಳಿಕೆ ಬೇಡ. ನಮ್ಮ ಸರ್ಕಾರ ಸುಭದ್ರವಾಗಿ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರು ಕೆಲಸ ಮಾಡ್ತಿದ್ದಾರೆ. ಅವರ ನೇತೃತ್ವದಲ್ಲಿ ನಾವೆಲ್ಲ ಒಟ್ಟಿಗೆ ಕೆಲಸ ಮಾಡ್ತಿದ್ದೇವೆ. ಯಾರೂ ಭವಿಷ್ಯ ನುಡಿಯೋದು ಬೇಕಿಲ್ಲ ಎಂದು ಎಂದು ಕುಟುಕಿದರು.


ಪವರ್ ಶೇರಿಂಗ್ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಪವರ್ ಇಲ್ಲ, ಯಾವ ಶೇರಿಂಗೂ ಇಲ್ಲ. 5 ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ ಎಂದರು.



Join Whatsapp