ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್’ಗೆ ಬರುತ್ತಿದ್ದ ಖಾಸಗಿ ಬಸ್’ಗಳು ಇಂದಿನಿಂದ ಸರ್ವೀಸ್ ಬಸ್ ನಿಲ್ದಾಣದ ಮೂಲಕ ಸಂಚರಿಸಲು ಆರಂಭಿಸಿವೆ.
ಸಿಟಿ, ಖಾಸಗಿ ಮತ್ತು ಸರ್ವೀಸ್ ಬಸ್’ಗಳು ಶನಿವಾರದಿಂದ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣಕ್ಕೆ ಬಾರದೆ ಖಾಸಗಿ ಬಸ್ ನಿಲ್ದಾಣದ ಮೂಲಕ ಪ್ರಯಾಣಿಸುತ್ತಿದೆ. ಈ ಎಲ್ಲಾ ಬಸ್ ಗಳು ಸ್ಟೇಟ್ ಬ್ಯಾಂಕ್’ಗೆ ಬಂದರೆ ಈ ರಸ್ತೆಯಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಆರ್.ಟಿಒ, ಕೆಎಸ್ ಆರ್ ಟಿಸಿ, ಬಸ್ ಮಾಲಕರ ಸಂಘ, ಎಂಸಿಸಿ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳು ಸಭೆ ನಡೆಸಿ ಚರ್ಚೆ ನಡೆಸಿದ್ದರು.
ಸಭೆಯಲ್ಲಿ ಎಲ್ಲಾ ಖಾಸಗಿ ಬಸ್ ಗಳನ್ನು ಸಿಟಿ ಸರ್ವೀಸ್ ಬಸ್ ನಿಲ್ದಾಣದ ಮೂಲಕವೇ ಓಡಿಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿತ್ತು.