ನನ್ನ ಬೆಂಬಲಿಗನ ಕಾರು ನಿಲ್ಲಿಸಬೇಡಿ: ಅಧಿಕಾರಿಗಳಿಗೆ ಶಾಸಕರ ವಾರ್ನಿಂಗ್

Prasthutha|

ಗದಗ:  ನಾನು ಹೇಳಿದ ಬೊಲೆರೋ ವಾಹನವನ್ನು ಹಿಡಿಯಬಾರದೆಂದು‌  ತಮ್ಮ  ಕ್ಷೇತ್ರದ ವಾಹನ ಸವಾರರೊಬ್ಬರಿಗೆ ಶಾಸಕರೊಬ್ಬರು ಬರೆದು ಕೊಟ್ಟಿರುವ ಶಿಫಾರಸ್ಸು ಪತ್ರ ವೈರಲ್ ಆಗಿದೆ.

- Advertisement -

ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಪ್ಪ ಎಸ್ ಲಮಾಣಿಯವರ ಸಹಿ ಇರುವ ಶಿಫಾರಸ್ಸು ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪತ್ರದಲ್ಲಿ, ಇದು ತಮ್ಮ ಕ್ಷೇತ್ರದ ವಾಹನ, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳಗಟ್ಟಿಯ ಜಿ ಬಸವರಾಜ ಎಂವರು ನನ್ನ ಕ್ಷೇತ್ರ ಶಿರಹಟ್ಟಿಯ ವಿಧಾನಸಭಾ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ನಮ್ಮ ಪಕ್ಷದ ಕಾರ್ಯಕರ್ತರೂ ಆಗಿರುತ್ತಾರೆ. ನನಗೆ ಚಿರಪರಿಚಿತರಾಗಿದ್ದು, ಅವರ ಬೊಲೆರೋ ವಾಹನ AP-39, V-3517 ಅನ್ನು ಹಿಡಿಯಬಾರದು ಮತ್ತು ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದು ಉಲ್ಲೇಖಿಸಿದ್ದಾರೆ.

- Advertisement -

ವೈರಲ್ ಪತ್ರ‌ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಜೊತೆಗೆ ಪತ್ರ ನಕಲಿಯೇ ಎಂಬ ಸಂಶಯವೂ ಮೂಡಿದೆ.



Join Whatsapp