ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ತಮ್ಮ ವಿರುದ್ಧ ಮಾಡಿರುವ ಟೀಕೆಗೆ ತೀಕ್ಷ್ಣ ವಾಗಿ ತಿರುಗೇಟು ನೀಡಿರುವ ಟಿಎಂಸಿ ಸಂಸದೆ, ಗೋವಾ ಉಸ್ತುವಾರಿ ಮಹುವಾ ಮೊಯಿತ್ರಾ, ಬೊಗಳುವ ನಾಯಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಬ್ ಹಾಥಿ ಚಲಾ ಬಾಝಾರ್ ತೊ ಕುತ್ತೆ ಭೋಂಕೆ ಹಝಾರ್ ( ರಸ್ತೆಯಲ್ಲಿ ಆನೆ ನಡೆಯುತ್ತಿರುವಾಗ ಸಾವಿರ ನಾಯಿ ಬೊಗಳುತ್ತವೆ). ಬಂಗಾಳದಲ್ಲಿ ಸೋತ ಪಕ್ಷದ ಅಧ್ಯಕ್ಷರ ಬಗ್ಗೆ ನಾವೇಕೆ ಉತ್ತರಿಸಬೇಕು. ನಮಗೆ ಮಾಡಲು ಬೇರೆ ಕೆಲಸ ಇಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ವಿರುದ್ಧ ಟಿಎಂಸಿ ಮತ್ತು ಆಮ್ ಆದ್ಮಿ ಪಕ್ಷಗಳು ಮೈತ್ರಿಯ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮೊಯಿತ್ರಾ, ಭಾರತದಲ್ಲಿ ಬಿಜೆಪಿಯನ್ನು ವಿಭಿನ್ನ ತಂತ್ರಗಳಿವೆ. ಗೋವಾದಲ್ಲಿ ನಾವು ಏಕಾಂಗಿಯಾಗಿ 40 ಸ್ಥಾನಗಳಲ್ಲಿ ಸ್ಪರ್ಧೆ ನಡೆಸಲಿದ್ದೇವೆ. ಗೋವಾದಲ್ಲಿ ಬಹುತೇಕ ರಾಜಕೀಯ ಪಕ್ಷಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿವೆ. ಇಂತಹ ದುಷ್ಟ ರಾಜಕೀಯವನ್ನು ತಡೆಯಲು ಕಾಂಗ್ರೆಸ್ ಯಾವುದೇ ಪ್ರಯತ್ನ ನಡೆಸಿಲ್ಲ ಎಂದು ವಾಗ್ದಾಳಿ ನಡೆಸಿದರು.