‘ಅಗ್ನಿಪಥ’ದಲ್ಲಿ ಓಡಿಸುವ ಮೂಲಕ ನಿರುದ್ಯೋಗಿಗಳ ಸಂಯಮದ ‘ಅಗ್ನಿ ಪರೀಕ್ಷೆ’ ಬೇಡ: ರಾಹುಲ್ ಗಾಂಧಿ

Prasthutha|

ನವದೆಹಲಿ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ಸೇನೆಯ ಕಾರ್ಯಾಚರಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

- Advertisement -

ಭಾರತವು ಪಾಕಿಸ್ತಾನ ಹಾಗೂ ಚೀನಾದಿಂದ ಬೆದರಿಕೆ ಎದುರಿಸುತ್ತಿದೆ. ಆದರೆ ಅಗ್ನಿಪಥ್ ಯೋಜನೆಯಿಂದ ಸೇನಾಪಡೆಗಳ ಕಾರ್ಯವಿಧಾನದ ಮೇಲೆ ಪರಿಣಾಮ ಬೀರುತ್ತದೆ. ದೇಶದ ಗೌರವ, ಸಂಪ್ರದಾಯ, ಪಡೆಗಳ ಶಿಸ್ತಿನೊಂದಿಗೆ ಸರ್ಕಾರವು ರಾಜಿ ಮಾಡಿಕೊಳ್ಳುವುದನ್ನು ಬಿಡಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

2 ವರ್ಷಗಳಲ್ಲಿ ನೇರ ನೇಮಕಾತಿ ಇಲ್ಲ, 4 ವರ್ಷಗಳ ನಂತರ ಸ್ಥಿರ ಭವಿಷ್ಯವೂ ಇಲ್ಲ, ಸರ್ಕಾರಕ್ಕೆ ಸೈನ್ಯದ ಬಗ್ಗೆ ಗೌರವವೂ ಇಲ್ಲ. ಪ್ರಧಾನಿಗಳೇ ದೇಶದ ನಿರುದ್ಯೋಗಿ ಯುವ ಜನರ ನೋವನ್ನು ಆಲಿಸಿ, ಅವರನ್ನು ‘ಅಗ್ನಿಪಥ’ದಲ್ಲಿ ಓಡಿಸುವ ಮೂಲಕ ಅವರ ಸಂಯಮದ ‘ಅಗ್ನಿ ಪರೀಕ್ಷೆ’ ಮಾಡಬೇಡಿ ಎಂದು ರಾಹುಲ್ ಗಾಂಧಿ ಸರಕಾರವನ್ನು ಕೇಳಿಕೊಂಡಿದ್ದಾರೆ.



Join Whatsapp