ನಾಯಿಯನ್ನು ಕಾರಿಗೆ ಕಟ್ಟಿ ಎಳೆದೊಯ್ದ ದುಷ್ಕರ್ಮಿಯ ಬಂಧನ

Prasthutha|

ಕೊಚ್ಚಿ : ಸಾಕು ನಾಯಿಯನ್ನು ತನ್ನ ಕಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದು ಅಮಾನವೀಯತೆ ಮೆರೆದ ದುಷ್ಕರ್ಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಕೇರಳದ ಕೊಚ್ಚಿಯಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನೊಬ್ಬ ಈ ಕೃತ್ಯವನ್ನು ವಿರೋಧಿಸಿ, ಆಕ್ಷೇಪ ವ್ಯಕ್ತಪಡಿಸಿದ ಬಳಿಕ, ಕಾರಿನ ಮಾಲಕ ತನ್ನ ನಾಯಿಯನ್ನು ಕಾರಿಗೆ ಕಟ್ಟಿ ಎಳೆಯುವುದನ್ನು ನಿಲ್ಲಿಸಿದ್ದಾನೆ. ಈ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಎರ್ನಾಕುಳಂನ ಕೊಚ್ಚಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ನಾಯಿಕ ಕುತ್ತಿಗೆ ಹಗ್ಗವನ್ನು ಕಟ್ಟಿ, ಕಾರಿನ ಹಿಂಬದಿಯ ಡಿಕ್ಕಿಗೆ ಕಟ್ಟಿ ಹಾಕಿ ರಸ್ತೆಯಲ್ಲಿ ಎಳೆದಾಡಲಾಗಿತ್ತು. ಸಾಕು ನಾಯಿಗೆ ದೇಹದಲ್ಲಿ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗಿದೆ.

- Advertisement -

ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಾಯಿ ತನ್ನ ಪ್ರದೇಶದಲ್ಲಿ ಕಿರಿಕಿರಿ ಮಾಡುತ್ತಿದ್ದೆಂದು 62ರ ಹರೆಯದ ವ್ಯಕ್ತಿ ಅದನ್ನು ತನ್ನ ಪ್ರದೇಶದಿಂದ ಹೊರಗೆ ಕೊಂಡೊಯ್ಯುವುದಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

Join Whatsapp