ಜೆಡಿಎಸ್ ಗೆ ಆತ್ಮಸಾಕ್ಷಿ ಇದೆಯೇ: ಮುಖ್ಯಮಂತ್ರಿ ಸಿದ್ದರಾಮಯ್ಯ

Prasthutha|

ಬೆಂಗಳೂರು: ಜೆಡಿಎಸ್ ಗೆ ಗೆಲ್ಲಲು 45 ಮತಗಳ ಅಗತ್ಯವಿದೆ ಅಷ್ಟು ಮತಗಳು ಅವರಿಗಿದೆಯೇ ? ಅವರಿಗೆ ಆತ್ಮಸಾಕ್ಷಿ ಇದೆಯೇ ಎಂದು ಪ್ರಶ್ನಿಸಿ ಅವರ ಮತಗಳೇ ನಮಗೆ ಬರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

- Advertisement -

ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಯ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ  ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯ ಸಭಾ ಚುನಾವಣೆಯ ಬಗ್ಗೆ ಮಾತನಾಡಿ ಎಲ್ಲರೂ ಗೆಲ್ಲಬೇಕೆಂದೆ ಸ್ಪರ್ಧಿಸುತ್ತಾರೆ ಎಂದರು.

- Advertisement -

ಶಾಸಕರಿಗೆ ಆಮಿಷ

ಅಡ್ಡಮತ ವಿಚಾರವಾಗಿ ಕಾನೂನು ತಿದ್ದಿ ಎಫ್.ಐ.ಆರ್. ಹಾಕಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಅವರಿಗೆ ಮತವಿಲ್ಲ ದಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸಿ , ಶಾಸಕರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಬೆದರಿಕೆ ಹಾಕಿರುವುದಕ್ಕೆ ಎಫ್.ಐ.ಆರ್ ಹಾಕಲಾಗಿದೆ ಎಂದರು. ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.



Join Whatsapp