ದೋಡಾ ಎನ್ ಕೌಂಟರ್: ಬಿಜೆಪಿಯ ತಪ್ಪು ನೀತಿಗಳ ಫಲ; ರಾಹುಲ್ ಗಾಂಧಿ ವಾಗ್ದಾಳಿ

Prasthutha|

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಎನ್ ಕೌಂಟರ್ ಕಾರ್ಯಾಚರಣೆ ವೇಳೆ ಮೇಜರ್ ಸೇರಿದಂತೆ ನಾಲ್ವರು ಭಾರತೀಯ ಸೇನೆಯ ಸಿಬ್ಬಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತೀಯ ಸೈನಿಕರು ಮತ್ತು ಅವರ ಕುಟುಂಬಗಳು ಬಿಜೆಪಿಯ ತಪ್ಪು ನೀತಿಗಳ ಭಾರವನ್ನು ಹೊರುತ್ತಿದ್ದಾರೆ. ಬಿಜೆಪಿಯ ತಪ್ಪು ನೀತಿಗಳ ಫಲವಾಗಿ ನಮ್ಮ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

- Advertisement -


ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಕರ್ತವ್ಯದ ಸಾಲಿನಲ್ಲಿ ನಾಲ್ವರು ಯೋಧರು ಸಾವನ್ನಪ್ಪಿರುವ ಕುರಿತು ಎಕ್ಸ್ ಮಾಡಿದ ರಾಹುಲ್ ಗಾಂಧಿ, ಈ ನಿರಂತರ ಭಯೋತ್ಪಾದಕ ದಾಳಿಗಳು ಜಮ್ಮು ಮತ್ತು ಕಾಶ್ಮೀರದ ಹದಗೆಟ್ಟ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿವೆ ಎಂದು ಹಿಂದಿಯಲ್ಲಿ ಎಕ್ಸ್ನಲ್ಲಿ ಬರೆದಿದ್ದಾರೆ. “ಪುನರಾವರ್ತಿತ ಭದ್ರತಾ ಲೋಪಗಳ” ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ದುಃಖದ ಸಮಯದಲ್ಲಿ, ಇಡೀ ದೇಶವು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ನಿಂತಿದೆ ಎಂದು ಅವರು ಹೇಳಿದ್ದಾರೆ.



Join Whatsapp