ಮಹಿಳೆಯ ಹೊಟ್ಟೆಯಿಂದ 11.5 ಕೆಜಿ ತೂಕದ ಗಡ್ಡೆ ಹೊರತೆಗೆದ ವೈದ್ಯರು

Prasthutha|

ತುಮಕೂರು: ತಿಪಟೂರು ಪಟ್ಟಣದ ಕುಮಾರ್ ಆಸ್ಪತ್ರೆಯ ವೈದ್ಯರು ಮಹಿಳೆಯ ಹೊಟ್ಟೆಯಿಂದ ಬರೊಬ್ಬರಿ 11.5 ಕೆಜಿ ತೂಕದ ಗಡ್ಡೆ ಹೊರತೆಗೆದಿದ್ದಾರೆ.

- Advertisement -

ತಿಪಟೂರು ಪಟ್ಟಣದ ಗಾಂಧಿನಗರದ 45 ವರ್ಷದ ಮಹಿಳೆ ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ತಪಾಸಣೆ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಗಿದೆ. ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಿದ ಕುಮಾರ್ ಆಸ್ಪತ್ರೆಯ ವೈದ್ಯ ಡಾ. ಶ್ರೀಧರ್ ಮತ್ತು ಅವರ ತಂಡ 11.5 ಕೆ.ಜಿ. ತೂಕದ ಗೆಡ್ಡೆ ಹೊರತೆಗೆಯುವ ಮೂಲಕ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯ ಮಹಿಳೆ ಆರೋಗ್ಯವಾಗಿದ್ದಾರೆ.