ದೆಹಲಿಯಲ್ಲಿ ವೈದ್ಯರ ಪ್ರತಿಭಟನೆ | ದೇಶಾದ್ಯಂತ ಕೇಂದ್ರದ ವಿರುದ್ಧ ವೈದ್ಯರ ಆಕ್ರೋಶ

Prasthutha|

ನವದೆಹಲಿ : ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡಿರುವ ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿ ದೇಶಾದ್ಯಂತ ಇಂದು ಪ್ರತಿಭಟನೆ ನಿರತರಾದ ವೈದ್ಯರಿಗೆ ದೆಹಲಿಯ ಏಮ್ಸ್ ವೈದ್ಯರು ಬೆಂಬಲ ಸೂಚಿಸಿದ್ದಾರೆ.

- Advertisement -

ಕಪ್ಪು ಪಟ್ಟಿ ಧರಿಸಿ ಧರಣಿ ಕುಳಿತ ವೈದ್ಯರು ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಏಮ್ಸ್ ಸೇರಿದಂತೆ ದೆಹಲಿಯ ಹಲವು ಆಸ್ಪತ್ರೆಗಳ ವೈದ್ಯರು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸರಕಾರಿ ಆಸ್ಪತ್ರೆಗಳಾದ ಎಲ್ ಎನ್ ಜೆಪಿ ಆಸ್ಪತ್ರೆ, ರಾಜೀವ್ ಗಾಂಧಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಡಿಡಿಯು, ಜಿಟಿಬಿ, ಬಿಎಸ್ ಎ ಆಸ್ಪತ್ರೆ, ಸಂಜತ್ ಗಾಂಧಿ ಮೆಮೊರಿಯಲ್ ಆಸ್ಪತ್ರೆ, ಹಿಂದೂ ರಾವ್ ಆಸ್ಪತ್ರೆ ವೈದ್ಯರೂ ಕಪ್ಪು ಪಟ್ಟಿ ಧರಿಸಿ, ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.

- Advertisement -

ಸರಕಾರ ತನ್ನ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ವೈದ್ಯರು ಒತ್ತಾಯಿಸಿದ್ದಾರೆ. ಕೋವಿಡ್ 19 ರಹಿತ ಸೇವೆಗಳನ್ನು ಸ್ಥಗಿತಗೊಳಿಸಲು ಈಗ ಕರೆ ನೀಡಲಾಗಿದೆ. ಸರಕಾರ ತಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ಎಲ್ಲಾ ಸೇವೆಗಳನ್ನು ನಿರಾಕರಿಸುವ ಎಚ್ಚರಿಕೆಯನ್ನು ವೈದ್ಯರು ಈಗಾಗಲೇ ನೀಡಿದ್ದಾರೆ.



Join Whatsapp