ಪೊಲೀಸ್ ದೌರ್ಜನ್ಯ ಖಂಡಿಸಿ ವೈದ್ಯರಿಂದ ನಾಳೆ ದೇಶಾದ್ಯಂತ ಆರೋಗ್ಯ ಸೇವೆ ಸ್ಥಗಿತಕ್ಕೆ ಕರೆ

Prasthutha|

ನವದೆಹಲಿ : ದೆಹಲಿ ಪೊಲೀಸರು ವೈದ್ಯರ ಮೇಲೆ ನಡೆಸಿದ ದೌರ್ಜನ್ಯವನ್ನು ವಿರೋಧಿಸಿ ಡಿಸೆಂಬರ್ 29ರಂದು ಬೆಳಿಗ್ಗೆ 8 ರಿಂದ ದೇಶಾದ್ಯಂತ ಎಲ್ಲ ಆರೋಗ್ಯ ಸೇವೆಗಳಿಂದ ಸಂಪೂರ್ಣ ಹಿಂತೆಗೆದುಕೊಳ್ಳುವಂತೆ ಫೆಡರೇಷನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ ಕರೆ ನೀಡಿದೆ ಎಂದು ತಿಳಿದು ಬಂದಿದೆ.

- Advertisement -

ವೈದ್ಯರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯ ಸಮಯದಲ್ಲಿ ಮಹಿಳಾ ವೈದ್ಯರನ್ನು ಪುರುಷ ಪೊಲೀಸ್ ಸಿಬ್ಬಂದಿ ಕ್ರೂರವಾಗಿ ಥಳಿಸಿ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಎಫ್‌‌ಎಐಎಂಎ ತಿಳಿಸಿದೆ. ಇನ್ನು ನೀಟ್-ಪಿಜಿ 2021 ಕೌನ್ಸೆಲಿಂಗ್ ವಿಳಂಬದ ಬಗ್ಗೆ ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ನಿವಾಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ರಸ್ತೆಯಲ್ಲಿ ಪೊಲೀಸರು ಮತ್ತು ವೈದ್ಯರ ನಡುವೆ ಘರ್ಷಣೆ ನಡೆದಿದೆ. ಅನೇಕ ಜನರು ಬೀದಿ ಬದಿಯಲ್ಲಿ ಗಾಯಗೊಂಡಿದ್ದರು ಎಂದು ಹೇಳಿದೆ.

ಪೊಲೀಸರ ಈ ದೌರ್ಜನ್ಯವನ್ನು ಖಂಡಿಸಿ ದೇಶಾದ್ಯಂತ ಡಿಸೆಂಬರ್ 29 ರಂದು ಎಲ್ಲಾ ಆರೋಗ್ಯ ಸೇವೆಗಳನ್ನು ಸಂಪೂರ್ಣ ಹಿಂತೆಗೆದುಕೊಳ್ಳಲಾಗುವುದು ಎಂದು ಕರೆ ನೀಡಿದೆ.

- Advertisement -

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp