ಪೂಜೆಗೆ ತೆರಳಿದ್ದ ವೈದ್ಯ ನದಿಯಲ್ಲಿ ಮುಳುಗಿ ಮೃತ್ಯು

Prasthutha|

ಹಾಸನ: ಪೂಜೆಗೆ ತೆರಳಿದ್ದ ವೈದ್ಯರೊಬ್ಬರು ಹೇಮಾವತಿ ನದಿಯ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಖೋನಾಪುರದಲ್ಲಿ ನಡೆದಿದೆ.

- Advertisement -


ಮೃತರನ್ನು ಡಾ.ಚಂದ್ರಶೇಖರ್ (31) ಎಂದು ಗುರುತಿಸಲಾಗಿದೆ.


ಅವರು ಹೊಳೆನರಸಿಪುರದ ಕೆರಗೋಡಿನಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಕರ್ತವ್ಯಕ್ಕೆ ತೆರಳುವ ಮುನ್ನ ಖೋನಾಪುರದ ಐಲ್ಯಾಂಡ್ ನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು. ಈ ವೇಳೆ ನದಿಗೆ ಸ್ನಾನಕ್ಕೆ ತೆರಳಿದ್ದಾಗ ಈ ಅವಘಡ ನಡೆದಿದೆ.