ಸಿನಿಮೀಯ ಶೈಲಿಯಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ವೈದ್ಯ ದಂಪತಿಯ ಗುಂಡಿಕ್ಕಿ ಹತ್ಯೆ

Prasthutha|

ರಾಜಸ್ಥಾನ : ಹಾಡಹಗಲಲ್ಲೇ ವಾಹನನಿಬಿಡ ರಸ್ತೆಯಲ್ಲಿ ವೈದ್ಯ ದಂಪತಿಯನ್ನು ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ರಾಜಸ್ಥಾನದ ಭರತ್ ಪುರ್ ನಲ್ಲಿ ನಡೆದಿದೆ.

- Advertisement -

ಗುಂಡಿನ ದಾಳಿಗೊಳಪಟ್ಟು ಮೃತರಾದ ವೈದ್ಯ ದಂಪತಿಗಳನ್ನು ರಾಜಸ್ಥಾನದ ಡಾ. ಸುದೀಪ್ ಗುಪ್ತಾ ಮತ್ತು ಡಾ. ಸೀಮಾ ಗುಪ್ತಾ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ 4.45ರ ವೇಳೆಗೆ ಕಾರನ್ನು ಓವರ್ಟೇಕ್ ಮಾಡಿ ಅಡ್ಡಗಟ್ಟಿದ್ದಾರೆ. ವೈದ್ಯ ಏನಾಯಿತು ಎಂದು ತಿಳಿಯಲು ಕಾರಿನ ಕಿಟಕಿ ಗ್ಲಾಸ್ ಇಳಿಸುತ್ತಿದ್ದಂತೆಯೇ ಓರ್ವ ಗುಂಡಿನ ಸುರಿಮಳೆಗೈದು ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಿದ್ದಾರೆ.


ಗುಂಡಿನ ದಾಳಿ ನಡೆಸುತ್ತಿರುವ ಭಯಾನಕ ದೃಶ್ಯವು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಮೇಲ್ನೋಟಕ್ಕೆ ಕೊಲೆಯ ಹಿಂದೆ ಪೂರ್ವ ದ್ವೇಷ ಕಾರಣ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಎರಡು ವರ್ಷದ ಹಿಂದೆ ವೈದ್ಯ ದಂಪತಿ ಮಹಿಳೆಯೊಬ್ಬಳ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದ್ದು, ಕೊಲೆಯಾದ ಮಹಿಳೆ ವೈದ್ಯರೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

- Advertisement -
https://youtu.be/vS9lERwf2DQ


ಘಟನೆಯ ಹಿನ್ನಲೆ:

ತನ್ನ ಕ್ಲಿನಿಕ್ನಲ್ಲಿರುವ ಮಹಿಳೆಯೊಂದಿಗೆ ಡಾ. ಸುದೀಪ್ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಅನುಮಾನ ಡಾ. ಸೀಮಾಗೆ ಕಾಡುತ್ತಿತ್ತು. ಹೀಗಾಗಿ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗ ವಾಸವಿದ್ದ ಮನೆಗೆ ಡಾ. ಸೀಮಾ ಬೆಂಕಿ ಹಚ್ಚಿದ್ದರು ಎನ್ನಲಾಗಿದ್ದು, ಈ ಘಟನೆಯಲ್ಲಿ ತಾಯಿ-ಮಗು ಇಬ್ಬರು ಸಾವನ್ನಪ್ಪಿದ್ದರು.ಈ ಘಟನೆಗೂ ಮತ್ತು ವೈದ್ಯ ದಂಪತಿಯ ಕೊಲೆಗೂ ಸಂಬಂಧವಿರುವುದರ ಬಗ್ಗೆ ಇದೀಗ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Join Whatsapp