ಬರ್ತ್ ಡೇ ವೀಡಿಯೋದಲ್ಲಿ ರತನ್ ಟಾಟಾ ಜೊತೆಗಿದ್ದ ಯುವಕ ಯಾರು ಗೊತ್ತಾ ?

Prasthutha|

ನವದೆಹಲಿ: ಹಿರಿಯ ಉದ್ಯಮಿ ರತನ್ ಟಾಟಾ ಡಿಸೆಂಬರ್ 28ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

- Advertisement -

ಹುಟ್ಟುಹಬ್ಬ ಆಚರಣೆಯ ವೇಳೆಯೂ ಅವರು ಸರಳತೆ ಮೆರೆದಿದ್ದಾರೆ. ವೀಡಿಯೋದಲ್ಲಿ ರತನ್​ ಟಾಟಾ ಅವರು ಕುರ್ಚಿಯ ಮೇಲೆ ಕುಳಿತಿದ್ದಾರೆ ಮತ್ತು ಅವರ ಮುಂಭಾಗದ ಮೇಜಿನ ಮೇಲೆ ಸಣ್ಣ ಕಪ್‌ ಕೇಕ್ ಇರಿಸಲಾಗಿದೆ. ಈ ಪುಟ್ಟ ಕೇಕ್ ಕತ್ತರಿಸುವ ಮೂಲಕ ಹಿರಿಯ ಉದ್ಯಮಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಮಯದಲ್ಲಿ, ಒಬ್ಬ ಯುವಕ ಅವರೊಂದಿಗೆ ಕುಳಿತಿರುವುದು ಕಂಡುಬರುತ್ತದೆ.

ಸದ್ಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ರತನ್​ ಟಾಟಾ ಅವರ ಜೊತೆಗಿರುವ ಯುವಕ ಯಾರು ಎನ್ನುವ ಕುತೂಹಲ ಎಲ್ಲರಿಗೂ ಕಾಡಿತ್ತು. ರತನ್ ಟಾಟಾ ಜೊತೆ ಕಾಣಿಸಿಕೊಂಡಿರುವ ಯುವಕನ ಹೆಸರು ಶಂತನು ನಾಯ್ಡು, ಶಂತನು ರತನ್ ಟಾಟಾ ಅವರ ಆಪ್ತ ಕಾರ್ಯದರ್ಶಿ. ಅವರು ಸುಮಾರು 3 ವರ್ಷಗಳಿಂದ ಟಾಟಾ ಗ್ರೂಪ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ರತನ್​ ಟಾಟಾ ಹಾಗೂ ಶಂತನು ಅವರ ಮಧ್ಯೆ ಉತ್ತಮ ಬಾಂಧವ್ಯವಿದೆ.

Join Whatsapp