ಜಗತ್ತಿನ ರಾಷ್ಟ್ರಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ಸ್ವತಂತ್ರ ರಾಷ್ಟ್ರ ಯಾವುದು ಗೊತ್ತಾ !

Prasthutha|

ಲಂಡನ್:  400 ವರ್ಷಗಳ ಸುದೀರ್ಘ  ಬ್ರಿಟಿಷ್ ರಾಜಮನೆತನದ ಅಧಿಪತ್ಯಕ್ಕೆ ಸಡ್ಡುಹೊಡೆದು ಕೆರಿಬಿಯನ್ ದ್ವೀಪ ರಾಷ್ಟ್ರವೊಂದು ಸ್ವಾತಂತ್ರ್ಯ ಘೋಷಿಸಿಕೊಂಡಿದೆ.

- Advertisement -

ಬ್ರಿಟನ್  ಮಹಾರಾಣಿ  ಕ್ವೀನ್ ಎಲಿಜಬೆತ್ ಇನ್ನು ಮುಂದೆ ತನ್ನ ಮುಖ್ಯಸ್ಥೆ ಅಲ್ಲ ಎಂದು ಘೋಷಿಸಿದ್ದು, ಈ ಮೂಲಕ 400 ವರ್ಷಗಳ ಬ್ರಿಟನ್ ಅಧಿಪತ್ಯವನ್ನು ಬಾರ್ಬಡೋಸ್ ಕೊನೆಗಾಣಿಸಿದೆ. ಇನ್ನು ಹೊಸ ಗಣರಾಜ್ಯವೆಂದು ಘೋಷಣೆ ಮಾಡಿಕೊಂಡಿರುವ ಬಾರ್ಬಡೋಸ್, ತನ್ನ ದೇಶದ ಮೊದಲ ಅಧ್ಯಕ್ಷೆಯನ್ನಾಗಿ ಸಾಂಡ್ರಾ ಮೇಸನ್ ಅವರನ್ನು ಆಯ್ಕೆ ಮಾಡಿದೆ.

ಬಾರ್ಬಡೋಸ್ ಈಗ ಗಣರಾಜ್ಯವಾಗಿದ್ದರೂ ಕಾಮನ್‌ವೆಲ್ತ್ ಕೂಟದಲ್ಲಿ ಉಳಿದುಕೊಳ್ಳಲಿದ್ದು, ಆಫ್ರಿಕಾ, ಏಷ್ಯಾ, ಅಮೆರಿಕ ಹಾಗೂ ಯುರೋಪ್‌ನ ಸುಮಾರು 54 ರಾಷ್ಟ್ರಗಳು ಕಾಮನ್‌ವೆಲ್ತ್ ಸಂಘದಲ್ಲಿವೆ. ಇನ್ನು ಬಾರ್ಬಡೋಸ್ ಸ್ವಾತಂತ್ರ್ಯಕ್ಕೆ ಸಂತಸ ವ್ಯಕ್ತಪಡಿಸಿರುವ ಭಾರತ, ನೂತನ ಗಣರಾಜ್ಯದ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದೆ.

Join Whatsapp