2023ರ ಹೊಸವರ್ಷವನ್ನು ಯಾವ ದೇಶ ಮೊದಲು‌ ಆಚರಿಸುತ್ತೆ ಗೊತ್ತಾ?

Prasthutha|

ನವದೆಹಲಿ: ಹೊಸ ವರ್ಷ 2023 ಸಂಭ್ರಮಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಎಲ್ಲರೂ ಕೆಲವೇ ಕೆಲವು ಗಂಟೆಯಲ್ಲಿ ನ್ಯೂ ಇಯರ್‌ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ.

- Advertisement -

ದೇಶದಿಂದ ದೇಶಕ್ಕೆ ಕಾಲಮಾನದಲ್ಲಿ ವ್ಯತ್ಯಾಸವಿರುವುದರಿಂದಾಗಿ ಬೇರೆ ಬೇರೆ ಸಮಯದಲ್ಲಿ ಹೊಸ ವರ್ಷಾಚರಣೆ ಮಾಡಲಾಗುತ್ತದೆ.

ಯಾವ ದೇಶ ಮೊದಲು ಹೊಸ ವರ್ಷ ಆಚರಿಸುತ್ತೆ?

- Advertisement -

ಓಷಿಯಾನಿಯಾವು ವಿಶ್ವದದಲ್ಲೇ ಹೊಸ ವರ್ಷಾಚರಣೆಯನ್ನು ಮೊದಲು ಆಚರಿಸುತ್ತದೆ. ಟೊಂಗಾ, ಕಿರಿಬಾಟಿ ಮತ್ತು ಸಮೋವಾಟಿನಿ ಪೆಸಿಫಿಕ್ ದ್ವೀಪ ರಾಷ್ಟ್ರಗಳು ಎಲ್ಲಾ ದೇಶಗಳಿಗಿಂತಲೂ ಮೊದಲು ಹೊಸ ವರ್ಷವನ್ನು ಸ್ವಾಗತಿಸುತ್ತವೆ. ಭಾರತೀಯ ಕಾಲಮಾನದ ಪ್ರಕಾರ ಡಿ.31ರಂದು ಬೆಳಗ್ಗೆ 10ಗಂಟೆಗೆ ಈ ದೇಶಗಳು ಹೊಸ ವರ್ಷವನ್ನು ಸಂಭ್ರಮಿಸುತ್ತವೆ (ಅಂದರೆ ಈಗಾಗಲೇ ಸಂಭ್ರಮಾಚರಣೆ ಮಾಡಿವೆ).

ಯಾವ ದೇಶ ಕೊನೆಯಲ್ಲಿ ನ್ಯೂ ಇಯರ್‌ ಆಚರಿಸುತ್ತೆ?

ಯುನೈಟೆಡ್ ಸ್ಟೇಟ್ಸ್ ಹತ್ತಿರದ ಜನವಸತಿಯಿಲ್ಲದ ದ್ವೀಪಗಳಾದ ಬೇಕರ್ ಐಲ್ಯಾಂಡ್ ಮತ್ತು ಹೌಲ್ಯಾಂಡ್‌ನಲ್ಲಿ ಕೊನೆಯಲ್ಲಿ ನ್ಯೂ ಇಯರ್‌ ಆಚರಿಸಲಾಗುತ್ತೆ. ಇಲ್ಲಿ ಭಾರತೀಯ ಕಾಲಮಾನದ ಪ್ರಕಾರ ಜನವರಿ 1 ರಂದು ಸಂಜೆ 5:30 ಕ್ಕೆ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ.

 ಭಾರತದಲ್ಲಿ ಡಿ.31ರಂದು ಸಾಯಂಕಾಲ 3:45 ಸಮಯವಾಗಿದ್ದಾಗ, ನ್ಯೂಜಿಲೆಂಡ್‌ನಲ್ಲಿ ಮಧ್ಯರಾತ್ರಿ 12 ಗಂಟೆಯಾಗಿರುತ್ತದೆ. ಹೀಗಾಗಿ ನ್ಯೂಜಿಲೆಂಡ್‌ನಲ್ಲಿ ಭಾರತೀಯ ಕಾಲಮಾನದಂತೆ ಡಿ.31ರ ಸಾಯಂಕಾಲ 3:45ಕ್ಕೆ ನ್ಯೂ ಇಯರ್‌ ಆಚರಿಸಲಾಗುತ್ತದೆ.

 ಆಸ್ಟ್ರೇಲಿಯಾದಲ್ಲಿ ಭಾರತೀಯ ಕಾಲಮಾನದಂತೆ ಸಂಜೆ 6:30ಕ್ಕೆ ಹೊಸ ವರ್ಷ ಸಂಭ್ರಮಿಸಲಾಗುತ್ತದೆ (ಅಂದರೆ ಈಗಾಗಲೇ ಸೆಲಬ್ರೇಷನ್‌ ಆಗಿದೆ). ಜಪಾನ್‌, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾದಲ್ಲಿ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:30ಕ್ಕೆ ನ್ಯೂ ಇಯರ್‌ ಸಂಭ್ರಮಾಚರಣೆ ಮಾಡಿದ್ದಾರೆ.

Join Whatsapp