ಈ ವರ್ಷ ರಾಜ್ಯ ಸರ್ಕಾರ ಮಾಡಿರುವ ಒಟ್ಟು ಸಾಲ ಎಷ್ಟು ಕೋಟಿ ಗೊತ್ತೇ ? ವಿಧಾನಸಭೆಯಲ್ಲಿ ಬಹಿರಂಗ !

Prasthutha: December 15, 2021

ಬೆಳಗಾವಿ: 2020-21ನೇ ಸಾಲಿನಲ್ಲಿ ರಾಜ್ಯ ಸರಕಾರದ ಒಟ್ಟು ಸಾಲ ₹96,509 ಕೋಟಿ ರೂ. ಸೇರ್ಪಡೆಯಾಗಿದೆ. ವಿಧಾನಸಭೆಯಲ್ಲಿ ಮಂಗಳವಾರ ಮಂಡನೆಯಾದ ಹಣಕಾಸು ಲೆಕ್ಕಪತ್ರ ಸಂಬಂಧ ಮಹಾಲೇಖಪಾಲರ ವರದಿಯಲ್ಲಿಈ ಅಂಶ ದಾಖಲಾಗಿದೆ. 2020-21ನೇ ಸಾಲಿನಲ್ಲಿ ಮಾರ್ಚ್‌ 31ಕ್ಕೆ ಅಂತ್ಯಗೊಂಡಂತೆ, ರಾಜ್ಯ ಸರಕಾರ ಒಟ್ಟು ₹61,900 ಕೋಟಿ ರೂ. ಮಾರುಕಟ್ಟೆ ಸಾಲ ಪಡೆದಿದೆ.

ರಾಜ್ಯ ಸರಕಾರವು ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಉಂಟಾಗಿದ್ದ ಆದಾಯದ ಕೊರತೆ ಸರಿದೂಗಿಸಲು ಹೆಚ್ಚುವರಿ ಸಾಲ ಮಾಡಿದೆ. ಇದು ಒಟ್ಟಾರೆ ಸಾಲದ ಪ್ರಮಾಣದಲ್ಲಿ ಏರಿಕೆಗೆ ಕಾರಣವಾಗಿದೆ.ಕೊರೊನಾದಿಂದ ಜಿಎಸ್‌ಟಿ ಆದಾಯದಲ್ಲೂ ಕೊರತೆಯಾಗಿತ್ತು. ಇದರ ಜತೆಗೆ ಕೇಂದ್ರ ಸರಕಾರವು ಜಿಎಸ್‌ಟಿ ಪರಿಹಾರವನ್ನು ಸಾಲದ ರೂಪದಲ್ಲಿ ನೀಡಲು ನಿರ್ಧರಿಸಿತ್ತು. ಇದರಿಂದ ಸಾಲದ ಹೊರೆ 18 ಸಾವಿರ ಕೋಟಿಯಾಗಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಆದಾಯ ಕುಸಿತವು, ಈ ಬಾರಿಯ ಸಾಲದ ಹೊರೆಯ ಹೆಚ್ಚಳಕ್ಕೆ ಕಾರಣವಾಗಿದೆ. ರಾಜ್ಯದ ಆದಾಯದ ಮೂಲಗಳಲ್ಲೂ ಕುಸಿತವಾಗಿದ್ದು, ಜಿಎಸ್‌ಟಿ 2019-20ರಲ್ಲಿ ₹42.147 ಕೋಟಿ ರೂ.ಗಳಿಂದ 2020-21ರಲ್ಲಿ ₹37.711 ಕೋಟಿ ರೂ.ಗಳಿಗೆ ಇಳಿದಿದೆ. ಸರಕಾರದ ವಿವಿಧ ಆದಾಯದ ಮೂಲಗಳಾದ ರಾಜ್ಯ ಅಬಕಾರಿ, ನೋಂದಣಿ ಶುಲ್ಕ ಹಾಗೂ ಇತರ ತೆರಿಗೆಗಳು ಕೂಡ ಕಡಿಮೆಯಾಗಿದೆ. ಹೀಗಾಗಿ ಸರಕಾರದ ಸಾಲವು ವರ್ಷದಲ್ಲಿ ₹96,509 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಇದರಲ್ಲಿ ₹18,421 ಕೋಟಿ ರೂ. ಬಜೆಟ್‌ ಸಾಲವೂ ಒಳಗೊಂಡಿದೆ ಎಂದು ವರದಿ ಹೇಳಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!