ಕಳೆದ ಸೆಪ್ಟಂಬರ್ ನಲ್ಲಿ ವಾಟ್ಸಾಪ್ ಬ್ಯಾನ್ ಮಾಡಲ್ಪಟ್ಟ ಭಾರತೀಯರ ಒಟ್ಟು ಖಾತೆಗಳೆಷ್ಟು ಗೊತ್ತೇ?

Prasthutha|

ನವದೆಹಲಿ: ಆಧುನಿಕ ಯುಗದಲ್ಲಿ ಜನರ ಮೊಬೈಲ್ ಬಳಕೆ ಹೆಚ್ಚಾದಂತೆ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್ ಬಳಕೆಯೂ ಹೆಚ್ಚಾಗಿದೆ. ಇದೀಗ ವಾಟ್ಸಾಪ್ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು ಕಳೆದ ಸೆಪ್ಟಂಬರ್ ನಲ್ಲೇ 22 ಲಕ್ಷ ಭಾರತೀಯರ ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದೆ.

- Advertisement -


ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 2,209,000 ಭಾರತೀಯರ ಖಾತೆಗಳನ್ನು ನಿಷೇಧಿಸಲಾಗಿದೆ ಮತ್ತು 560 ಕುಂದುಕೊರತೆ ವರದಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದೆ. ಭಾರತೀಯರ ಖಾತೆಯನ್ನು +91 ಫೋನ್ ಸಂಖ್ಯೆಯ ಮೂಲಕ ಗುರುತಿಸಲಾಗಿದೆ ಎಂದು ವರದಿ ತಿಳಿಸಿದೆ.


ವಾಟ್ಸಾಪ್ ನಿಂದನೆ ಮತ್ತು ಸುಳ್ಳು ಸುದ್ದಿಗಳನ್ನು ಹರಡಿಸುವ ಸಂದೇಶವನ್ನು ತಡೆಗಟ್ಟುವಲ್ಲಿ ಮುಂಚೂಣಿಯಲ್ಲಿದೆ. ನಾವು ಕೃತಕ ಬುದ್ದಿಮತ್ತೆ ಮತ್ತು ಇತರೆ ಅತ್ಯಾಧುನಿಕ ತಂತ್ರಜ್ಞಾನ, ದತ್ತಾಂಶ ವಿಜ್ಞಾನಿಗಳು ಮತ್ತು ತಜ್ಞರು ಹಾಗೂ ಇತರೆ ಪ್ರಕ್ರಿಯೆಗಳಲ್ಲಿ ಸತತವಾಗಿ ಹೂಡಿಕೆ ಮಾಡಿದ್ದೇವೆ. ವಾಟ್ಸಾಪ್ ಎಂದಿಗೂ ಬಳಕೆದಾರರ ಸುರಕ್ಷಿತವನ್ನು ಬಯಸುತ್ತದೆ ಎಂದು ತಿಳಿಸಿದೆ.
ಅಲ್ಲದೇ ವಾಟ್ಸಾಪ್ ನಿಂದನೆ ತಡೆಗಟ್ಟಲು ಜಾಗತಿಕ ಸರಾಸರಿ ಸಂಖ್ಯೆಯು ತಿಂಗಳಿಗೆ ಸುಮಾರು 8 ಮಿಲಿಯನ್ ಖಾತೆಗಳನ್ನು ನಿಷೇಧಿಸುತ್ತಿವೆ ಎಂದು ಹೇಳಿದೆ.

Join Whatsapp