ಪ್ರಧಾನಿ ಮೋದಿಯ ಹೊಸ ಕಾರಿನ ಬೆಲೆ, ವಿಶೇಷತೆ ಏನು ಗೊತ್ತಾ?

Prasthutha|

ನವದೆಹಲಿ: ಪ್ರಧಾನಿ ಮೋದಿ ಬಳಸುತ್ತಿದ್ದ ಹಳೆಯ ಕಾರನ್ನು ಬದಲಾಯಿಸಲಾಗಿದೆ. ಈಗ ಹೊಸ ಕಾರು ಮರ್ಸಿಡಿಸ್-ಮೇಬ್ಯಾಕ್ S650 ಗಾರ್ಡ್ ಮೋದಿ ಬಳಸುತ್ತಿದ್ದಾರೆ.

- Advertisement -

ಈ ಕಾರಿನ ಬೆಲೆ 12 ಕೋಟಿ ರೂಪಾಯಿಯಾಗಿದ್ದು, ಅತಿ ದುಬಾರಿಯಾಗಿದೆ.

ಇತ್ತೀಚೆಗೆ ದೆಹಲಿಯ ಹೈದರಾಬಾದ್ ಹೌಸ್‌ ನಲ್ಲಿ ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸ್ವಾಗತಿಸಲು ಆಗಮಿಸಿದಾಗ ಪ್ರಧಾನಿಯವರ ಹೊಸ ಅತ್ಯಾಧುನಿತ ಶಸ್ತ್ರಸಜ್ಜಿತ ಕಾರು ಗಮನ ಸೆಳೆದಿದೆ.

- Advertisement -

ಕಾರಿನ ವಿಶೇಷತೆ:

ಮರ್ಸಿಡಿಸ್-ಮೇಬ್ಯಾಕ್ S650 ಗಾರ್ಡ್ ಕಾರು ಅತ್ಯುನ್ನತ ಮಟ್ಟದ ಶಸ್ತ್ರಸಜ್ಜಿತ ರಕ್ಷಣೆ ನೀಡುತ್ತದೆ.

AK-47 ರೈಫಲ್‌ಗಳಿಂದ ನಡೆಯುವ ಆಕ್ರಮಣವನ್ನು ತಡೆದುಕೊಳ್ಳುವ ಸಾಮರ್ಥ್ಯ ಇದಕ್ಕಿದೆ.

ಈ ಕಾರು ಕೇವಲ ಎರಡು ಮೀಟರ್ ದೂರದಿಂದ 15 ಕೆ.ಜಿ ಟಿಎನ್‌ ಟಿ ಸ್ಫೋಟದಿಂದ ಪ್ರಯಾಣಿಕರನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಕಾರಿನ ಕಿಟಕಿಗಳ ಒಳಭಾಗವನ್ನು ಪಾಲಿಕಾರ್ಬೊನೇಟ್ ಲೇಪನದಿಂದ ತಯಾರಿಸಲಾಗಿದೆ. ಇದು ನೇರ ಸ್ಫೋಟದಿಂದ ಪ್ರಯಾಣಿಕರನ್ನು ರಕ್ಷಿಸಲು ಹೆಚ್ಚು ನೆರವಾಗುತ್ತದೆ. ರಾಸಾಯನಿಕ ದಾಳಿಯ ಸಂದರ್ಭದಲ್ಲಿ ಕ್ಯಾಬಿನ್ನಿಂದಾಗಿ ಪ್ರತ್ಯೇಕ ಗಾಳಿಯ ಪೂರೈಕೆಯನ್ನು ನೀಡುವಂತೆ ಈ ಕಾರನ್ನು ತಯಾರಿಸಲಾಗಿದೆ.

ಗರಿಷ್ಠ ವೇಗ 160 kmphಗೆ ನಿರ್ಬಂಧಿಸಲಾಗಿದೆ. ಕಾರು ವಿಶೇಷವಾದ ರನ್-ಫ್ಲಾಟ್ ಟೈರ್‌ ಗಳನ್ನು ಹೊಂದಿದೆ. ಪಂಕ್ಚರ್‌ ಆದ ಸಂದರ್ಭದಲ್ಲಿಯೂ ತ್ವರಿತವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp