ಬೆಳಿಗ್ಗೆ ಖಾಲಿ ಹೊಟ್ಟೆಗೆ ನೀರು ಕುಡಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

Prasthutha|

ನಮ್ಮ ದೇಹವು 70% ನೀರಿನಿಂದ ಮಾಡಲ್ಪಟ್ಟಿರುವುದರಿಂದ ನೀರು ನಮಗೆ ಬಹಳ ಅವಶ್ಯಕವಾಗಿದೆ. ನಾವು ದಿನದಲ್ಲಿ ಕಡಿಮೆ ನೀರು ಕುಡಿದರೆ, ನಾವು ನಿರ್ಜಲೀಕರಣದಂತಹ ಸಮಸ್ಯೆಗಳನ್ನು ಎದುರಿಸಬಹುದು. ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.

- Advertisement -


ರಾತ್ರಿಯ ಸಮಯದಲ್ಲಿ ನಾವು ಮಲಗಿ ನಿದ್ರಿಸುತ್ತಿರಬೇಕಾದರೆ ನಮ್ಮ ದೇಹದಲ್ಲಿ ಸಾಕಷ್ಟು ಪ್ರಕ್ರಿಯೆಗಳು ನಡೆಯುತ್ತವೆ. ಈ ಸಮಯದಲ್ಲಿ ಅತಿಮುಖ್ಯವಾಗಿ ನಮ್ಮ ದೇಹದಿಂದ ಸಾಕಷ್ಟು ವಿಷಕಾರಿ ಅಂಶಗಳು ಹೊರ ಹೋಗಲು ತಯಾರಿ ನಡೆಯುತ್ತದೆ.


ಇದರ ಜೊತೆಗೆ ಇಡೀ ದಿನ ಚಟುವಟಿಕೆಯಿಂದ ಕೂಡಿರುವ ನಮ್ಮ ದೇಹ ರಾತ್ರಿಯ ಸಮಯದಲ್ಲಿ ಸಂಪೂರ್ಣವಾಗಿ ವಿಶ್ರಾಂತಿ ತೆಗೆದುಕೊಂಡು ಮತ್ತೆ ಮರು ದಿನದ ಕೆಲಸ ಕಾರ್ಯಗಳಿಗೆ ತನ್ನನ್ನು ಹೊಂದಿಸಿಕೊಳ್ಳುತ್ತದೆ. ಹೀಗಾಗಿ ಅಗತ್ಯ ಪ್ರಮಾಣದ ನೀರಿನ ಅಂಶ ನಮ್ಮ ದೇಹದಲ್ಲಿ ಲಭ್ಯವಿರಬೇಕಾಗುತ್ತದೆ.

- Advertisement -


ಮೆಟಬಾಲಿಸಂ ಪ್ರಕ್ರಿಯೆ ವೃದ್ಧಿಯಾಗುತ್ತದೆ

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಮ್ಮ ದೇಹದ ಮೆಟಬಾಲಿಸಂ ಪ್ರಕ್ರಿಯೆ ಶೇಕಡ 24 % ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಜೀರ್ಣ ಪ್ರಕ್ರಿಯೆಯಲ್ಲಿ ಮೆಟಬಾಲಿಸಂ ಪ್ರಕ್ರಿಯೆ ತುಂಬಾ ಮುಖ್ಯವಾಗುತ್ತದೆ.


ದೇಹದ ತೂಕ ನಿರ್ವಹಣೆ ಆಗುತ್ತದೆ

ದಿನದಲ್ಲಿ ಆಗಾಗ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಹೊಟ್ಟೆ ಹಸಿವು ನೀಗುತ್ತದೆ. ಹೆಚ್ಚು ಆಹಾರ ಸೇವಿಸಬೇಕೆಂಬ ಬಯಕೆ ಕಡಿಮೆಯಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಾಗುವುದು ತಪ್ಪುತ್ತದೆ.

ಎದೆಯುರಿ ಮತ್ತು ಅಜೀರ್ಣತೆ ದೂರವಾಗುತ್ತದೆ

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿನ ಆಮ್ಲೀಯತೆ ತಗ್ಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸೇರಿದಂತೆ ಎದೆಯುರಿ ಮತ್ತು ಅಜೀರ್ಣತೆ, ಮಲಬದ್ಧತೆ ಸಮಸ್ಯೆಗಳು ನಿಯಂತ್ರಣವಾಗುತ್ತದೆ.


ಕೂದಲು ನಯವಾಗಿ ಸೊಂಪಾಗಿ ಬೆಳೆಯುತ್ತದೆ

ನಮ್ಮ ಕೂದಲುಗಳಲ್ಲಿ ಕಾಲು ಭಾಗ ನೀರಿನ ಅಂಶ ಇರುತ್ತದೆ ಎಂದು ಹೇಳುತ್ತಾರೆ. ಸರಿಯಾದ ಪ್ರಮಾಣದಲ್ಲಿ ನೀರು ಸೇವನೆ ಮಾಡದಿದ್ದರೆ ಕೂದಲು ಗಟ್ಟಿಯಾಗಿ ತುಂಬಾ ತೆಳುವಾಗಿ ಅನಾರೋಗ್ಯದಿಂದ ಅರ್ಧಕ್ಕೆ ಮುರಿದು ಬೀಳುತ್ತವೆ.


ಚರ್ಮದ ಹೊಳಪು ಹೆಚ್ಚಾಗುತ್ತದೆ

ಹಲವಾರು ಚರ್ಮ ಸಂಬಂಧಿತ ಸಮಸ್ಯೆಗಳು ಕೆಲವು ಬಾರಿ ನಮ್ಮ ದೇಹಕ್ಕೆ ಸಾಕಷ್ಟು ನೀರಿನ ಅಂಶ ಇಲ್ಲದೆ ಪ್ರಾರಂಭವಾಗುತ್ತವೆ ಎಂದು ಹೇಳುತ್ತಾರೆ.



Join Whatsapp