ರೂ.12.20 ಕೋಟಿ ಮೊತ್ತದ ಬ್ರಿಟನ್ ಲಾಟರಿ ಬಂದಿದೆ ಎಂದು ನಂಬಿದ ಯುವತಿ ಕಳಕೊಂಡ ಮೊತ್ತವೆಷ್ಟು ಗೊತ್ತಾ?

Prasthutha|

ಚಿಂತಾಮಣಿ: 220 ಗ್ರೇಟ್ ಬ್ರಿಟನ್ ಪೌಂಡ್ (12.20 ಕೋಟಿ) ಮೊತ್ತದ ಲಾಟರಿ ಬಂದಿದೆ ಎಂದು ನಂಬಿಸಿ ಯುವತಿಯೊಬ್ಬಳಿಂದ ರೂ.4.87 ಲಕ್ಷ ಸೈಬರ್ ಖದೀಮರು ವಂಚಿಸಿದ್ದಾರೆ.

- Advertisement -

ತಾಲ್ಲೂಕಿನ ಯಗವಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಿಗಾನಹಳ್ಳಿ ಗ್ರಾಮದ ರುಕ್ಕಣಿ ಮೋಸಕ್ಕೊಳಗಾದ ಯುವತಿ. ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.

ಕಳೆದ ಅಕ್ಟೋಬರ್ 22ರಂದು ಯುವತಿಯ ಮೊಬೈಲ್’ಗೆ 220 ಬ್ರಿಟನ್ ಪೌಂಡ್ ಲಾಟರಿ ಬಂದಿದೆ, ಬ್ಯಾಂಕ್ ಡ್ರಾಪ್ಟ್ ಮೂಲಕ ಪಡೆದುಕೊಳ್ಳುವಂತೆ ಸಂದೇಶ ಬಂದಿತ್ತು. ಆದರೆ ನೀವು ಕಸ್ಟಮ್ಸ್ ಶುಲ್ಕ ರೂ.21,500 ಪಾವತಿಸಬೇಕೆಂದು ತಿಳಿಸಲಾಗಿತ್ತು. ಅದರಂತೆ ಯುವತಿ ಹಣ ವರ್ಗಾವಣೆ ಮಾಡಿದ್ದಾರೆ.

- Advertisement -

ಲಾಟರಿ ಹಣ ಪಡೆಯಬೇಕಾದರೆ ವಿವಿಧ ಶುಲ್ಕ ಪಾವತಿಸಬೇಕು ಎಂದು ಸುಳ್ಳು ಹೇಳಿ ಉಜ್ಜೀವನ್ ಬ್ಯಾಂಕ್ ಖಾತೆಗೆ ರೂ. 4,17,750 ಹಾಗೂ ಬ್ಯಾಂಕ್ ಆಫ್ ಬರೋಡಾ ಖಾತೆಗೆ ರೂ.48,000 ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ನಂತರ ಲಾಟರಿ ಹಣ ಪಡೆಯಲು ಅಂಚೆ ಮೂಲಕ ಯುವತಿಯ ವಿಳಾಸಕ್ಕೆ ಆರ್‌’ಬಿಎಸ್ ಮಾಸ್ಟರ್ ಕಾರ್ಡ್ ಕಳುಹಿಸಿದ್ದರು. ಕಾರ್ಡ್ ಮೂಲಕ ಹಣ ಪಡೆಯಲು ಹೋದರೆ ಕಾರ್ಡ್ ಆ್ಯಕ್ಟಿವೇಟ್ ಆಗಲಿಲ್ಲ. ಅವರು ನೀಡಿದ್ದ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿದರೆ ತಲುಪುತ್ತಿಲ್ಲ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

Join Whatsapp