ಎರಡು ಸಾವಿರ ರೂ. ನೋಟು ಮುದ್ರಿಸಲು ಸರ್ಕಾರ ಮಾಡಿದ ಖರ್ಚೆಷ್ಟು ಗೊತ್ತೇ?

Prasthutha|

ಹೊಸದಿಲ್ಲಿ: ಸರ್ಕಾರ 2016ರಲ್ಲಿ 500 ರೂ ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ 2,000 ರೂ ನೋಟುಗಳನ್ನು ಮುದ್ರಿಸಿತ್ತು.

- Advertisement -

 ಈಗ ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಈ ನೋಟುಗಳಿಗೆ ಸರ್ಕಾರ ಎಷ್ಟು ಖರ್ಚು ಮಾಡಿದೆ ಎಂಬ ಪ್ರಶ್ನೆಗೆ ಆರ್​ಬಿಐ ಉತ್ತರ ನೀಡಿದೆ. ಒಟ್ಟು 7.40 ಲಕ್ಷಕೋಟಿ ರೂ ಮೊತ್ತವೆನಿಸುವ 370 ಕೋಟಿಗೂ ಹೆಚ್ಚು ನೋಟುಗಳನ್ನು ಪಡೆಯಲು ಸರ್ಕಾರ 1,300 ಕೋಟಿ ರೂ ಖರ್ಚು ಮಾಡಿರುವ ವಿಚಾರವನ್ನು ಆರ್​ಟಿಐ ಅಡಿಯಲ್ಲಿ ಆರ್​ಬಿಐ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ.

ಆರ್​ಬಿಐ ಮೂರು ಹಂತಗಳಲ್ಲಿ 2,000 ರೂ. ಮುಖಬೆಲೆಯ ನೋಟುಗಳನ್ನು ಪಡೆದಿದೆ. 2016-17ರಲ್ಲಿ 350.4 ಕೋಟಿ ನೋಟುಗಳು, 2017-18ರಲ್ಲಿ 15.1 ಕೋಟಿ ನೋಟುಗಳು, ಹಾಗು 2018-19ರಲ್ಲಿ 4.7 ಕೋಟಿ ನೋಟುಗಳನ್ನು ಆರ್​ಬಿಐ ಪಡೆದಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ. ಲಿ ಸಂಸ್ಥೆ ಈ ನೋಟುಗಳನ್ನು ಆರ್​ಬಿಐಗೆ ಮುದ್ರಿಸಿ ಕೊಟ್ಟಿತ್ತು.

- Advertisement -

ಸಾವಿರ ನೋಟುಗಳ ಮುದ್ರಣಕ್ಕೆ 4,180 ರೂ ಖರ್ಚು?

ನೋಟು ಮುದ್ರಣ ಸಂಸ್ಥೆಯು 2,000 ರೂ ಮುಖಬೆಲೆಯ ಒಂದು ಸಾವಿರ ನೋಟುಗಳನ್ನು 4,180 ರೂಗಳಿಗೆ ಆರ್​ಬಿಐಗೆ ಮುದ್ರಿಸಿ ಕೊಟ್ಟಿದೆ. 2016-17ರಲ್ಲಿ ಒಂದು ಸಾವಿರ ನೋಟುಗಳಿಗೆ 3,540 ರೂ ಬೆಲೆಯಂತೆ ಆರ್​ಬಿಐಗೆ 350.4 ಕೋಟಿ ನೋಟುಗಳನ್ನು ಕೊಟ್ಟಿದೆ. 2017-18 ಮತ್ತು 2018-19ರಲ್ಲಿ ಕ್ರಮವಾಗಿ 4,180 ರೂ ಮತ್ತು 3,530 ರೂ ಬೆಲೆಯಲ್ಲಿ ಸಾವಿರ ನೋಟುಗಳನ್ನು ಮುದ್ರಿಸಿ ಕೊಡಲಾಗಿದೆ. ಅಂದರೆ ಸುಮಾರು 3.50 ರೂನಿಂದ 4.18 ರೂ ಬೆಲೆಗೆ ಒಂದು ನೋಟನ್ನು ಪಡೆಯಲಾಗಿದೆ.

ಈಗೆಷ್ಟಿದೆ 2,000 ರೂ ನೋಟುಗಳು?

ಆರ್​ಬಿಐನಿಂದ ಬಿಡುಗಡೆ ಆಗಿದ್ದ 2,000 ರೂ ಮುಖಬೆಲೆಯ ನೋಟುಗಳ ಒಟ್ಟು ಮೊತ್ತ 7.40 ಲಕ್ಷ ಕೋಟಿ ರೂಗೂ ಹೆಚ್ಚು ಇತ್ತು. ಕ್ರಮೇಣವಾಗಿ ನೋಟುಗಳನ್ನು ಚಲಾವಣೆಯಿಂದ ಆರ್​ಬಿಐ ಹಿಂಪಡೆದುಕೊಳ್ಳುತ್ತಾ ಹೋಗಿತ್ತು. 2023ರ ಮಾರ್ಚ್ ತಿಂಗಳಲ್ಲಿ 3.62 ಲಕ್ಷ ಕೋಟಿ ರೂ ಮೊತ್ತದ 2,000 ರೂ ನೋಟುಗಳು ಚಲಾವಣೆಯಲ್ಲಿದ್ದವು.

ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ಮೇ ತಿಂಗಳಲ್ಲಿ ಪ್ರಕಟಿಸಿದ ಬಳಿಕ ಶೇ. 93ರಷ್ಟು ನೋಟುಗಳು ಆರ್​ಬಿಐಗೆ ಹಿಂದಿರುಗಿವೆ. ಈ ನೋಟುಗಳನ್ನು ಮರಳಿಸಲು ಆರ್​ಬಿಐ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದೆ. ಇದನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Join Whatsapp