50 ಮಂದಿ ಉದ್ಯಮಿಗಳು ಬ್ಯಾಂಕುಗಳಿಗೆ ವಂಚಿಸಿದ ಮೊತ್ತ ಎಷ್ಟು ಗೊತ್ತಾ?

Prasthutha|

ನವದೆಹಲಿ: ದೇಶೀಯ ಬ್ಯಾಂಕುಗಳ ಎನ್’ಪಿಎ (ವಸೂಲಾಗದ ಹಣ) ಮೊತ್ತವು 8.9 ಲಕ್ಷ ಕೋಟಿಗೆ ಏರಿದ್ದುದು ಈಗ 3 ಲಕ್ಷ ಕೋಟಿಗೆ ಇಳಿದಿರುವುದಾಗಿ ಸಂಸತ್ತಿಗೆ ತಿಳಿಸಲಾಗಿದೆ.

- Advertisement -

ಮಾರ್ಚ್ 31, 2022ರವರೆಗೆ ಬೇಕೆಂದೇ 50 ಜನ ಬ್ಯಾಂಕುಗಳಿಗೆ ಟೋಪಿ ಹಾಕಿದ ಹಣದ ಮೊತ್ತ ರೂ. 92,570 ಕೋಟಿ ಎಂದು ಸಂಸತ್ತಿಗೆ ತಿಳಿಸಲಾಯಿತು.

ಹಣಕಾಸು ರಾಜ್ಯ ಮಂತ್ರಿ ಭಾಗವತ್ ಕರಾಡ್ ಅವರು ಲೋಕಸಭೆಗೆ ಲಿಖಿತ ಮಾಹಿತಿ ನೀಡಿದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ಮಾಹಿತಿ ಇದಾಗಿದೆ. ಪರಾರಿಯಾಗಿರುವ ರತ್ನ ವ್ಯಾಪಾರಿ ಮೆಹುಲ್ ಚೋಕ್ಸಿ ಅತಿ ಹೆಚ್ಚು ಮೊತ್ತ ಎಂದರೆ 7,848 ಕೋಟಿ ರೂಪಾಯಿ ಬ್ಯಾಂಕುಗಳಿಗೆ ಹಿಂದಿರುಗಿಸಿಲ್ಲ ಎಂದು ತಿಳಿಸಲಾಗಿದೆ.

- Advertisement -

ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ಇರುವವರು ಎರಾ ಇನ್ಫ್ರಾ ರೂ. 5,879 ಕೋಟಿ, ರೀಗೋ ಆಗ್ರೋ ರೂ. 4,803 ಕೋಟಿ ರೂ. ವಂಚಿಸಿದ್ದಾರೆ.

ಈ ಪಟ್ಟಿಗೆ ಸೇರಿದವರು ಸಾಲ ವಾಪಸು ಕೊಡದವರು, ಇವರಿಂದ ವಸೂಲಿ ಪ್ರಕ್ರಿಯೆ ಚಾಲೂ ಇರುತ್ತದೆ. ಇವರಿಗೆ ಬ್ಯಾಂಕುಗಳಿಂದ ಬೇರೆ ಯಾವುದೇ ಸವಲತ್ತು ಸಿಗದಂತೆ ಕಪ್ಪು ಪಟ್ಟಿಗೆ ಸೇರಿಸಲಾಗಿರುತ್ತದೆ ಎಂದೂ ತಿಳಿಸಲಾಗಿದೆ.

ಕಾನ್ ಕಾಸ್ಟ್ ಸ್ಟೀಲ್ ಮತ್ತು ಪವರ್ ರೂ. 4,596 ಕೋಟಿ, ಎಬಿಜಿ ಶಿಪ್ ಯಾರ್ಡ್ ರೂ. 3,708 ಕೋಟಿ, ಫ್ರೋಸ್ಟ್ ಇಂಟರ್ ನ್ಯಾಷನಲ್ 3,311 ಕೋಟಿ, ವಿನ್ಸಂ ಡೈಮಂಡ್ಸ್ ಆಂಡ್ ಜ್ಯುವೆಲ್ಲರಿ ರೂ. 2931 ಕೋಟಿ, ರೋಟೋಮ್ಯಾಕ್ ಗ್ಲೋಬಲ್ ರೂ. 2,893 ಕೋಟಿ, ಕೋಸ್ಟಲ್ ಪ್ರಾಜೆಕ್ಟ್ಸ್ ರೂ. 2,311 ಕೋಟಿ, ಜೂಮ್ ಡೆವಲಪರ್ಸ್ ರೂ. 2,147 ಕೋಟಿ ಪಟ್ಟಿಯಲ್ಲಿ ಮೇಲಿನ ಸಾಲಿನಲ್ಲಿ ಇದ್ದಾರೆ.

ದೇಶೀಯ ಒಡೆತನದ ಬ್ಯಾಂಕುಗಳಲ್ಲಿ ಚಾಲ್ತಿಯಲ್ಲಿಲ್ಲದ ಖಾತೆಗಳ ಮೊತ್ತವು ಒಮ್ಮೆ ರೂ. 8.9 ಲಕ್ಷ ಕೋಟಿಗೆ ಏರಿದ್ದುದು ಈಗ ರೂ. 3 ಲಕ್ಷ ಕೋಟಿಗೆ ಇಳಿದಿರುವುದಾಗಿಯೂ ಸಂಸತ್ತಿಗೆ ತಿಳಿಸಲಾಯಿತು.

ಆರ್’ಬಿಐ ಮೊತ್ತ ಗುಣಮಟ್ಟದ ವರದಿಯಂತೆ ಎನ್ ಪಿಎ ರೂ. 5.41 ಲಕ್ಷ ಕೋಟಿಗೆ ಇಳಿಕೆ ಆಗಿದೆ. ರೂ. 10.1 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್ ಮಾಡಲಾಗಿದೆ ಎಂದು ಸಚಿವ ಭಾಗವತ್ ಹೇಳಿದರು.



Join Whatsapp