ನವದೆಹಲಿ: ಜಾಗತಿಕ ಆರ್ಥಿಕ ಕುಸಿತದಿಂದಾಗಿ ಭಾರತ ಸೇರಿದಂತೆ ಜಾಗತಿಕವಾಗಿ ಕೆಲಸದಿಂದ ನೌಕರರ ವಜಾ ಹೆಚ್ಚುತ್ತಿದ್ದು, 2023ರಲ್ಲಿ ಜಾಗತಿಕವಾಗಿ ದಿನಕ್ಕೆ ಸರಾಸರಿ 1600ಕ್ಕೂ ಹೆಚ್ಚು ಐಟಿ ನೌಕರರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಉದ್ಯೋಗ ಸಂಬಂಧಿ ಮಾಹಿತಿ ಒದಗಿಸುವ ಖಾಸಗಿ ವೆಬ್ಸೈಟ್ ವರದಿ ಪ್ರಕಾರ 2022ರಲ್ಲಿ 1,000ಕ್ಕೂ ಹೆಚ್ಚು ಕಂಪನಿಗಳು 1,54,336 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿವೆ. ಈ ತಿಂಗಳ ಮೊದಲ 15 ದಿನಗಳಲ್ಲಿ 91 ಕಂಪನಿಗಳು 24,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿವೆ. ಅಮೆಜಾನ್ ಭಾರತದಲ್ಲಿ ಸುಮಾರು 1,000 ಮಂದಿ ಸೇರಿದಂತೆ ಜಾಗತಿಕವಾಗಿ 18,000 ನೌಕರರನ್ನು ವಜಾಗೊಳಿಸುವುದಾಗಿ ಘೋಷಿಸಿದೆ.