ಪ್ರಾದೇಶಿಕ ಪಕ್ಷಗಳಲ್ಲಿ ಡಿಎಂಕೆ ಅತಿ ಹೆಚ್ಚು ಆದಾಯ ಗಳಿಸಿದ ಪಕ್ಷ: ಎಡಿಆರ್ ವರದಿ

Prasthutha|

ನವದೆಹಲಿ: ದೇಶದ 31 ಪ್ರಾದೇಶಿಕ ಪಕ್ಷಗಳಲ್ಲಿ ತಮಿಳುನಾಡಿನ ಡಿಎಂಕೆ ಇಲ್ಲವೇ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಅತಿ ಹೆಚ್ಚು ಆದಾಯ ಗಳಿಸಿದ ಮತ್ತು ವ್ಯಯಿಸಿದ ಪಕ್ಷವಾಗಿ 2020-21ರ ವಿಶ್ಲೇಷಣೆಯಿಂದ ತಿಳಿದುಬಂದಿದೆ.

- Advertisement -

ಪ್ರಜಾಪ್ರಭುತ್ವ ಸುಧಾರಣಾ ಕೂಟ- ಎಡಿಆರ್ ಈ ಬಗೆಗಿನ ವರದಿ ಬಿಡುಗಡೆ ಮಾಡಿದೆ.

ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆದಾಯ ಹೇಳಿಕೆ ವರದಿಯನ್ನು ಎಡಿಆರ್ ವಿಶ್ಲೇಷಣೆ ಮಾಡಿದೆ. 2021ರ ಅಕ್ಟೋಬರ್ 31 ಇಂಥ ವರದಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಆದರೆ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಮೇ 27ರಲ್ಲಿ 54 ಪ್ರಾದೇಶಿಕ ಪಕ್ಷಗಳಲ್ಲಿ 23 ಪಕ್ಷಗಳು ಆದಾಯ ವರದಿಗಳು ಕಂಡುಬಂದಿಲ್ಲ.

- Advertisement -

ವಾರ್ಷಿಕ ಆದಾಯ ವರದಿ ಸಿಗದಿರುವ ಪಕ್ಷಗಳಲ್ಲಿ ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಕ್ಷ ಮತ್ತು ಜಮ್ಮು ಮತ್ತು ಕಾಶ್ಮೀರದ ನ್ಯಾಸನಲ್ ಕಾನ್ಫರೆನ್ಸ್ ಸಹ ಸೇರಿದೆ.

ಆದಾಯ ಘೋಷಣೆ ಮಾಡಿರುವ 31 ಪಕ್ಷಗಳ ಒಟ್ಟು ಆದಾಯವು ರೂ. 529.41 ಕೋಟಿ ಇದ್ದು, ಅದರಲ್ಲಿ ರೂ. 149.95 ಕೋಟಿ ಡಿಎಂಕೆ ಪಕ್ಷದ್ದಾಗಿದೆ. ಆಂಧ್ರದ ವೈಎಸ್ ಆರ್ ಕಾಂಗ್ರೆಸ್ ರೂ. 107.99 ಕೋಟಿ ಆದಾಯದೊಡನೆ ಎರಡನೆಯ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಬಿಜು ಜನತಾ ದಳದ ಕಳೆದ ವರುಷದ ಆದಾಯ ರೂ. 73.34 ಕೋಟಿ ಘೋಷಣೆ ಆಗಿದೆ.

ಅದೇ ವೇಳೆ ಈ 31 ಪ್ರಾದೇಶಿಕ ಪಕ್ಷಗಳು ಒಟ್ಟು ರೂ. 414.02 ಕೋಟಿ ವೆಚ್ಚದ ಲೆಕ್ಕ ಕೊಟ್ಟಿವೆ. ಅದರಲ್ಲಿ ಡಿಎಂಕೆಯ ವೆಚ್ಚ 52.77% ಎಂದರೆ ರೂ. 218.49 ಕೋಟಿ. ತೆಲುಗು ದೇಶಂ ಪಕ್ಷವು ರೂ. 54.76 ಕೋಟಿ ಮತ್ತು ಎಐಎಡಿಎಂಕೆ ರೂ. 42.36 ಕೋಟಿ ವೆಚ್ಚ ತೋರಿಸಿವೆ.

ಚುನಾವಣಾ ಬಾಂಡುಗಳು

31 ಪಕ್ಷಗಳು ಒಟ್ಟು 47.34% ಆದಾಯದ ಮೂಲ ಚುನಾವಣಾ ಬಾಂಡುಗಳು ಎಂದು ಹೇಳಿವೆ. 2019-20ರಲ್ಲಿ 7 ರಾಷ್ಟ್ರೀಯ ಪಕ್ಷಗಳ ಆದಾಯದ 62% ಚುನಾವಣಾ ಬಾಂಡುಗಳಿಂದ ಬಂದಿವೆ ಎಂದು ಘೋಷಿಸಿಕೊಂಡಿವೆ. ಒಟ್ಟಾರೆ ಹಣಕಾಸಿನ ಮಾಹಿತಿ ವರದಿಗಳು ಈಗೀಗ ಹೆಚ್ಚು ಪ್ರಗತಿಪರ ರೀತಿಯಲ್ಲಿ ಸಲ್ಲಿಸಲಾಗುತ್ತಿದೆ ಎಂದು ಎಡಿಆರ್ ಹೇಳಿದೆ.

“ಹಣಕಾಸು ಪಾರದರ್ಶಕತೆ ಪದ್ಧತಿಯು ಜವಾಬ್ದಾರಿಯುತ ಆರ್ಥಿಕ ನಿರ್ವಹಣೆಯು ರಾಜಕೀಯ ಪಕ್ಷಗಳ ಒಂದು ಅಂಗವಾಗಿದೆ. ಹಣಕಾಸು ಮಾಹಿತಿ ಲೆಕ್ಕ ನೀಡಲು ಅದರದೇ ಆದ ಕಟ್ಟುನಿಟ್ಟಿನ ಹಣ ಯಾಂತ್ರಿಕತೆ ಇದೆ. ಸತ್ಯವಾದ ಚಿತ್ರಣವನ್ನು ಮುಂದಿಡುವ ಸಲುವಾಗಿ ಒಂದು ಆಯವ್ಯಯದ ಪ್ರಮಾಣಿತ ಚೌಕಟ್ಟು ಲಭ್ಯವಿದ್ದು, ಆ ಮೂಲಕ ರಾಜಕೀಯ ಪಕ್ಷಗಳವರು ಸಾರ್ವಜನಿಕರಿಗೆ ತೆರೆದುಕೊಳ್ಳುವರು.” ಎಂದೂ ಎಡಿಆರ್ ವರದಿ ಹೇಳಿದೆ

Join Whatsapp