ಡಿಎಂಕೆ ಸರ್ಕಾರ, ರಾಜಕೀಯ ಲಾಭಕ್ಕಾಗಿ ಆಧ್ಯಾತ್ಮಿಕತೆ ಹೆಸರಲ್ಲಿ ದ್ವೇಷ ಹರಡುವವರ ವಿರುದ್ಧವಿದೆ: ಎಂ.ಕೆ.ಸ್ಟಾಲಿನ್

Prasthutha|

ಚೆನ್ನೈ: ಡಿಎಂಕೆ ಸರ್ಕಾರವು ರಾಜಕೀಯಕ್ಕಾಗಿ ಆಧ್ಯಾತ್ಮಿಕತೆಯ ಲಾಭವನ್ನು ಪಡೆದು ದ್ವೇಷ ಪ್ರಚಾರ ಮಾಡುವವರ ವಿರೋಧಿ, ಆದರೆ ಅಧ್ಯಾತ್ಮದ ವಿರೋಧಿಯಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಬುಧವಾರ ಚೆನ್ನೈ ಬಳಿಯ ಮೈಲಾಪುರದಲ್ಲಿರುವ ಕಪಾಲೀಶ್ವರ ದೇವಸ್ಥಾನದಲ್ಲಿ ಹೇಳಿದರು.

- Advertisement -

“ಡಿಎಂಕೆ ಸರ್ಕಾರವು ಆಧ್ಯಾತ್ಮಿಕತೆಗೆ ವಿರುದ್ಧವಾಗಿದೆ ಎಂದು ಬಿಂಬಿಸಲು ಧಾರ್ಮಿಕ ರಾಜಕಾರಣವನ್ನು ತನ್ನ ಉಳಿವಿನ ಮಾರ್ಗವಾಗಿ ಬಳಸಿಕೊಂಡ ರಾಜಕೀಯ ಪಕ್ಷಗಳು ಪ್ರಚಾರ ನಡೆಸುತ್ತಿವೆ” ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತಮಿಳು ಸಂತ ವಲ್ಲಲಾರ್ ಅವರ ಜನ್ಮದಿನವನ್ನು ಆಚರಿಸಲು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ (ಎಚ್ ಆರ್ ಮತ್ತು ಸಿಇ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

“ನಾನು ಮತ್ತು ಡಿಎಂಕೆ ಸರ್ಕಾರವು ಆಧ್ಯಾತ್ಮಿಕತೆಗೆ ವಿರುದ್ಧವಾಗಿದೆ ಎಂಬ ಭಾವನೆ ಮೂಡಿಸಲು ನನ್ನ ಭಾಷಣದ ಭಾಗಗಳನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಲಾಗುತ್ತಿದೆ, ಆದರೆ ಅದು ಸತ್ಯಕ್ಕೆ ದೂರವಾಗಿದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 

- Advertisement -

“ಡಿಎಂಕೆ ಪಕ್ಷ ಆಧ್ಯಾತ್ಮದ ವಿರುದ್ಧವಲ್ಲ, ಆದರೆ ಅದನ್ನು ತಮ್ಮ ಸ್ವಾರ್ಥ ರಾಜಕೀಯ ಕಾರ್ಯಸೂಚಿಯನ್ನು ಪೂರೈಸಲು ಮತ್ತು ಸಾಮಾಜಿಕ ತಾರತಮ್ಯವನ್ನು ಹರಡುವವರ ವಿರುದ್ಧ ಎಂದು ನಾನು ಬಹಳ ಸ್ಪಷ್ಟವಾಗಿ ಹೇಳುತ್ತೇನೆ. ತಮಿಳುನಾಡಿನ ಧಾರ್ಮಿಕ ಸಂಸ್ಕೃತಿಯನ್ನು ತಿಳಿದವರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ” ಎಂದು ಅವರು ಹೇಳಿದ್ದಾರೆ.

Join Whatsapp