ಮಂಗಳೂರು: ಆ.1 ಮಂಗಳವಾರ ಅಲ್ ರಹಬಾ ಪ್ಲಾಝದಲ್ಲಿರುವ ಡಿ ಕೆ ಎಸ್ ಸಿ ಕಚೇರಿಯಲ್ಲಿ ಜಿಲ್ಲಾ ಸಮಿತಿ ಮಂಗಳೂರು ಇದರ 11ನೇ ಸಾಮಾನ್ಯ ಸಭೆಯು ಅಧ್ಯಕ್ಷರಾದ ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ಅಲ್ ಹೈದ್ರೋಸಿ ತಂಗಳ್ ರವರ ನೇತೃತ್ವದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ವರದಿ ಲೆಕ್ಕಪತ್ರ ಮಂಡಿಸಲಾಯಿತು. ಕೇಂದ್ರ ಸಮಿತಿಯಿಂದ ಬಂದ ಎಲ್ಲಾ ವರದಿಗಳನ್ನು ವಾಚಿಸಲಾಯಿತು. ಆಗಸ್ಟ್ 15ರ ಒಳಗಾಗಿ ಎಲ್ಲಾ ಘಟಕಗಳ ಮಹಾಸಭೆ ನಡೆಸಬೇಕೆಂದು ತೀರ್ಮಾನಿಸಲಾಯಿತು. ನಂತರ ಜಿಲ್ಲಾ ಸಮಿತಿಯ ಮಹಾಸಭೆಯನ್ನು ನಡೆಸುವುದಾಗಿ ತೀರ್ಮಾನಿಸಲಾಯಿತು. ಪರಿಶುದ್ಧ ಕುರ್ ಆನ್ ಕಂಠ ಪಾಠ ಸ್ಪರ್ಧೆಗೆ ದಿನಾಂಕ ಗೊತ್ತುಪಡಿಸಿದ್ದು ಇದೇ ತಿಂಗಳ 26ರಂದು ಮೆಲ್ಕಾರ್ ಸಾಗರ್ ಆಡಿಟೋರಿಯಂ ನಲ್ಲಿ ನಡೆಸುವುದಾಗಿ ಈ ಹಿಂದೆಯೇ ತೀರ್ಮಾನಿಸಿದ್ದು ಈ ತಿಂಗಳ 8 ತಾರೀಕಿನೊಳಗಾಗಿ ಆಸಕ್ತಿ ಇರುವ 20ವರ್ಷಕ್ಕಿಂತ ಕೆಳಗಿನ ಗಂಡು ಮಕ್ಕಳು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಯಿತು.
ಅಧ್ಯಕ್ಷರಾದ ಸಯ್ಯಿದ್ ಮುಕ್ತಾರ್ ತಂಗಳ್ ರವರು ನಮ್ಮ ಡಿ ಕೆ ಎಸ್ ಸಿ ಒಂದು ವಿಭಿನ್ನ ರೀತಿಯಲ್ಲಿ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸಕ್ಕೆ ಹೆಚ್ಚು ಆಸಕ್ತಿ ವಹಿಸಿ ಕಾರ್ಯಾಚರಿಸುತ್ತಿದ್ದು ನಮ್ಮಿಂದಾಗುವ ಎಲ್ಲಾ ಸಹಾಯ ಸಹಕಾರ ನೀಡಬೇಕು ಎಂದರು.
ಸಾಮಾಜಿಕವಾಗಿ ಕೂಡ ಹೆಚ್ಚಿನ ಒತ್ತು ಕೊಟ್ಟು ಸೋಶಿಯಲ್ ವಿಂಗ್ ಒಂದನ್ನು ರಚಿಸಬೇಕು. ಅದರಲ್ಲಿ ಉತ್ತಮ ಜನಪರ ಸೇವೆ ಸಲ್ಲಿಸುವಂತಾಗಬೇಕು ಎಂದರು. ಸಭೆಯಲ್ಲಿ ಇನ್ನಿತರ ಹಲವಾರು ಮಂದಿ ಸದಸ್ಯರು ಭಾಗವಹಿಸಿದ್ದು ಸಭೆಯನ್ನು ಉತ್ತಮ ರೀತಿಯಲ್ಲಿ ನಡೆಸಲು ಸಹಕಾರವಾಯಿತು. (ಕುರ್ ಆನ್ ಸ್ಪರ್ಧೆಗೆ ಕರೆ ಮಾಡಿ- +91 8548-895311 / +91 761-9467805)